ಪೆರ್ಲ: ಕೇರಳ ಸ್ಟೇಟ್ ಸವರ್ೀಸ್ ಪೆನ್ಯನರ್ಸ್ ಯೂನಿಯನ್ ಎಣ್ಮಕಜೆ ಘಟಕದ ಕುಟುಂಬ ಸಂಗಮ ಮತ್ತು ಸಮ್ಮಾನ ಸಮಾರಂಭ-2018 ಪೆರ್ಲ ಪಡ್ರೆ ಸಭಾಭವನದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಎಣ್ಮಕಜೆ ಘಟಕದ ಅಧ್ಯಕ್ಷರಾದ ರವೀಂದ್ರನಾಥ ನಾಯಕ್ ಶೇಣಿ ವಹಿಸಿದ್ದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಎಣ್ಮಕಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಾರದಾ ವೈ ಮಾತನಾಡಿ, ಇದು ರಾಜಕೀಯ ರಹಿತವಾದ ಕೇರಳ ರಾಜ್ಯದ ಏಕೈಕ ಪಿಂಚಣಿದಾರರ ಸಂಘಟನೆ. ತಮ್ಮ ಹಕ್ಕುಗಳಿಗೆ, ಸವಲತ್ತುಗಳನ್ನು, ಸೌಕರ್ಯಗಳಿಗೆ ಸಂಘಟಿತ ಯತ್ನದಿಂದ ಪಡೆಯಲು ಹುಟ್ಟಿಕೊಂಡ ಸಂಘಟನೆ. ಎಲ್ಲ ಬೇಸರಗಳನ್ನು ಮರೆತು ತಮ್ಮ ಕುಟುಂಬದ ಜೊತೆಗೆ ಬಂದು ಇಲ್ಲಿ ದಿನವೊಂದು ಕಳೆಯವುದು, ಆತ್ಮೀಯ ಸಹೊದ್ಯೋಗಿಗಳೊಂದಿಗೆ ಮಾತನಾಡಿ ಮತ್ತೆ ನವ ಚೈತನ್ಯ ಪಡೆಯುವುದು ಈ ಕುಟುಂಬ ಸಂಗಮದ ಉದ್ದೇಶ. ಎಣ್ಮಕಜೆ ಪಂಚಾಯತ್ ವತಿಯಿಂದ ಈ ಸಂಘಟನೆಯ ಹಗಲು ವಿಶ್ರಾಂತಿ ಮನೆಯ ಕಟ್ಟಡಕ್ಕೆ ಬೇಕಾದ ಸ್ಥಳವನ್ನು ಮಂಜೂರು ಗೊಳಿಸಲು ಪ್ರಯತ್ನಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಎಣ್ಮಕಜೆ ವಲಯದ ವ್ಯಾಪ್ತಿಯಲ್ಲಿ 70 ವರ್ಷ ಪ್ರಾಯ ದಾಟಿದ ಪಿಂಚಣಿದಾರರಾದ ಮಹಾಲಿಂಗ ಭಟ್ ಕಡಪ್ಪು, ಗೋವಿಂದ ಭಟ್ ಪಿ, ಮಹಾಲಿಂಗ ಕಜಂಪಾಡಿ, ವೆಂಕಟೇಶ್ವರ ಭಟ್ ಆರೋಳಿ, ಎನ್.ಜಿ.ಗಂಗಮ್ಮ, ಸುಬ್ರಹ್ಮಣ್ಯ ಭಟ್ ಖಂಡಿಗೆ, ಶಂಕರನಾರಾಯಣ ಭಟ್ ಎಸ್, ಶಂಕರನಾರಾಯಣ ಭಟ್ ಮುಳಿಯಾಲ ಅವರನ್ನು ಸಂಘಟನೆ ವತಿಯಿಂದ ಸಮ್ಮಾನಿಸಲಾಯಿತು.
ಸಂಘಟನೆಯ ಕಾಸರಗೋಡು ಜಿಲ್ಲಾ ಕಾರ್ಯದಶರ್ಿ ಕುಂಞಂಬು ನಾಯರ್, ಮಂಜೇಶ್ವರ ಬ್ಲಾಕ್ ಅಧ್ಯಕ್ಷ ರವಿಚಂದ್ರ ಯು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಂಘಟನೆಯ ಮಂಜೇಶ್ವರ ಬ್ಲಾಕ್ ಕಾರ್ಯದಶರ್ಿ ಶೀನಪ್ಪ ಪೂಜಾರಿ ಮತ್ತು ಕೋಶಾಧಿಕಾರಿ ಈಶ್ವರ ಶುಭಾಶಂಸನೆಗೈದರು.
ಸರೋಜಿನಿ ಕುಮಾರಿ ಕೆ, ಗೀತಾ ಸಾರಡ್ಕ ಮತ್ತು ವಾಸುದೇವ ಭಟ್ ಎಸ್. ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಎಣ್ಮಕಜೆ ಘಟಕದ ಕಾರ್ಯದಶರ್ಿ ನಾರಾಯಣ ನಾಯಕ್ ಗುರುವಾರೆ ಸ್ವಾಗತಿಸಿ, ಡಾ.ಕೇಶವ ನಾಯಕ್ ವಂದಿಸಿದರು. ಎಸ್.ಎನ್.ಭಟ್ ಕಾರ್ಯಕ್ರಮ ನಿರೂಪಿಸಿದರು.
ಹಗಲು ವಿಶ್ರಾಂತಿ ಮನೆ : ಪತಿ ಪತ್ನಿ ಉದ್ಯೋಗದಲ್ಲಿರುವ ಕುಟುಂಬದಲ್ಲಿ ಪುಟ್ಟ ಮಕ್ಕಳನ್ನು ಚೈಲ್ಡ್ ಕೇರ್ ನಲ್ಲಿ ಬಿಡುವಂತೆ, ನಿವೃತ್ತ ಅಶಕ್ತ ಪಿಂಚಣಿದಾರರಿಗೂ ಹಗಲು ವಿಶ್ರಾಂತಿಗಾಗಿ ವಿಶೇಷ ಆರೈಕೆಗಳಿರುವ ವಿಶ್ರಾಂತಿ ಮನೆಗಳು ಕೇರಳದಲ್ಲಿ ಆರಂಭಗೊಂಡಿವೆ. ಬೆಳಗ್ಗೆ ಮನೆಯಲ್ಲಿ ತಿಂಡಿ ತಿಂದು ಉದ್ಯೋಗಕ್ಕೆ ಹೋಗುವ ಪತಿ ಪತ್ನಿಯರು ತಮ್ಮ ಮನೆಯ ಅಶಕ್ತ ಹಿರಿಯರನ್ನು ಈ ವಿಶ್ರಾಂತಿ ಮನೆಯಲ್ಲಿ ತಂದು ಬಿಡಬಹುದಾಗಿದೆ. ಇವರಿಗೆ ಲಘು ಉಪಹಾರ, ನೋಡಲು ಟಿ.ವಿ, ಕಂಪ್ಯೂಟರ್, ಇಂಟರ್ನೆಟ್ ಸೌಲ`್ಯ, ಓದಲು ಪತ್ರಿಕೆ, ಪುಸ್ತಕ ಇತ್ಯಾದಿಗಳನ್ನು ವ್ಯವಸ್ಥೆ ಗೊಳಿಸಲಾಗುತ್ತದೆ. ಸಂಜೆ ಉದ್ಯೋಗದಿಂದ ಹಿಂತಿರುಗಿ ದೊಡನೆ ಇವರನ್ನು ತಮ್ಮೊಡನೆ ಪುನ: ಮನೆಗೆ ಕರೆದೊಯ್ಯುವ ವ್ಯವಸ್ಥೆಯೇ ಪಿಂಚಣಿದಾರರ ವಿಶ್ರಾಂತಿ ಮನೆ.


