ಮುಳ್ಳೇರಿಯ: ಶ್ರೀ ರಾಮಚಂದ್ರಾಪುರ ಮಠದ ಅಂಗಸಂಸ್ಥೆಯಾದ `ಸಮರಸ'ಭೂಮಿಯಲ್ಲಿ ಗಣಪತಿ ಹವನ ಸಂಪನ್ನಗೊಂಡಿತು. ಶ್ರೀ ಮಠದ ಭಕ್ತರು ಸೇರಿಕೊಂಡು ವಲಯ ವೈದಿಕ ಪ್ರಧಾನ, ಸ್ಥಳೀಯ ಗುರಿಕ್ಕಾರ ಹಾಗು ಸಮರಸ ಟ್ರಸ್ಟ್ ಅಧ್ಯಕ್ಷ ಡಾ.ವಿ.ವಿ.ರಮಣ ಅವರ ನೇತೃತ್ವದಲ್ಲಿ ಗಣಪತಿ ಹವನ ನಡೆಯಿತು.
ಮುಳ್ಳೇರಿಯ ಹವ್ಯಕ ಮಂಡಲ ಚಂದ್ರಗಿರಿ ವಲಯದ ಮುಳ್ಳೇರಿಯದ ದೇಲಂಪಾಡಿ ಪರಿಸರದಲ್ಲಿ ರೂಪುಗೊಳ್ಳಲಿರುವ ಸಮರಸ ಭೂಮಿಯಲ್ಲಿ ನಡೆದ ಗಣಪತಿ ಹವನಕ್ಕೆ ವಲಯ ವೈದಿಕ ಪ್ರಧಾನರಾದ ನರಸಿಂಹರಾಜ ಪಯ ನೇತೃತ್ವ ನೀಡಿದರು. ಬಳಿಕ ಭಜನಾ ರಾಮಾಯಣ ಪಠಣ ನಡೆಯಿತು. ಸಮರಸ ಟ್ರಸ್ಟ್ನ ಅಧ್ಯಕ್ಷ ಡಾ.ವಿ.ವಿ.ರಮಣ ಅವರು ಧ್ವಜಾರೋಹಣ ನೆರವೇರಿಸಿದರು. ಶಂಖನಾದ, ಗುರುವಂದನೆ, ಗೋಸ್ತುತಿಯೊಂದಿಗೆ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಸಮರಸ ಟ್ರಸ್ಟ್ನ ಕಾರ್ಯದಶರ್ಿ ರಾಜಗೋಪಾಲ ಕೈಪ್ಪಂಗಳ ಸಮರಸ ಯೋಜನೆಯ ಸಮಗ್ರ ಮಾಹಿತಿಗಳನ್ನು ವಿವರಿಸಿ ಮುಂದಿನ ಕಾರ್ಯಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಶ್ರೀ ಮಠದ ನಿಮರ್ಾಣ ವಿಭಾಗ ಕಾರ್ಯದಶರ್ಿ ಕೆ.ನಾರಾಯಣ ಭಟ್ ಬೆಳ್ಳಿಗೆ, ಮಹಾಮಂಡಲ ಉಲ್ಲೇಖ ಪ್ರಧಾನ ಗೋವಿಂದ ಬಳ್ಳಮೂಲೆ, ಮಂಡಲ ವಲಯ ಪದಾಧಿಕಾರಿಗಳು, ಗುರಿಕ್ಕಾರರು ಉಪಸ್ಥಿತರಿದ್ದರು. ಸಮರಸ ಟ್ರಸ್ಟ್ನ ಸ್ಥಳಕ್ಕೆ ಬೇಕಾದ ನಾಮಫಲಕವನ್ನು ಜಿ.ಕೆ.ಭಟ್ ಕುಳೂರು ಅವರು ತಯಾರಿಸಿ ಕೊಡುಗೆಯಾಗಿ ನೀಡಿದರು
.



