ಬದಿಯಡ್ಕ: ಕಾಸರಗೋಡು ಜಿಲ್ಲೆಯ ಬದಿಯಡ್ಕ ಗ್ರಾಮಪಂಚಾಯತ್ನ ನೀಚರ್ಾಲಿನಲ್ಲಿ ಅಗ್ನಿಶಾಮಕ ಕೇಂದ್ರವನ್ನು ತೆರೆಯಲು ಅನುಮತಿ ನೀಡಬೇಕೆಂಬುದು ಗ್ರಾಮಪಂಚಾಯತ್, ಸಾರ್ವಜನಿಕರು, ವ್ಯಾಪಾರಿ ಸಂಘಟನೆಗಳು, ವಿವಿಧ ಸಂಸ್ಥೆಗಳ ಅನೇಕ ವರ್ಷಗಳ ಬೇಡಿಕೆಯಾಗಿದೆ. ಇದರೊಂದಿಗೆ ವಸತಿ ಸೌಕರ್ಯ, ಪರೇಡ್ ಮೈದಾನ, ಸಿವಿಲ್ ಟ್ರೈನಿಂಗ್ ಸೆಂಟರ್ ಸಹಿತ ಅನುಬಂಧ ಕಾರ್ಯಚಟುವಟಿಕೆಗಳಿಗಿರುವ ಎಲ್ಲಾ ವ್ಯವಸ್ಥೆಯನ್ನೂ ಅಣಿಗೊಳಿಸಬೇಕು ಎಂಬುದಾಗಿ ಬದಿಯಡ್ಕ ಗ್ರಾಮಪಂಚಾಯತ್ ಅಭಿವೃದ್ಧಿ ಸಮಿತಿಯ ಸದಸ್ಯ ಎಂ.ಎಚ್. ಜನಾರ್ಧನ ಆಗ್ರಹಿಸಿದ್ದಾರೆ. ಉಕ್ಕಿನಡ್ಕ ವೈದ್ಯಕೀಯ ಕಾಲೇಜು ಆಸ್ಪತ್ರೆ ಕಟ್ಟಡ ಶಿಲಾನ್ಯಾಸ ಸಮಾರಂಭದಲ್ಲಿ ಕೇರಳ ರಾಜ್ಯ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಈ ಸಂಬಂಧ ಮನವಿಯನ್ನು ನೀಡಲಾಯಿತು.
ಕಾಸರಗೋಡು ಜಿಲ್ಲೆಯ ಬದಿಯಡ್ಕ, ಎಣ್ಮಕಜೆ, ಕುಂಬ್ಡಾಜೆ, ಬೆಳ್ಳೂರು, ಪುತ್ತಿಗೆ, ಕಾರಡ್ಕ ಪಂಚಾಯತ್ಗಳ ಪ್ರದೇಶಗಳಲ್ಲಿ ಅಗ್ನಿದುರಂತ ಹಾಗೂ ಇನ್ನಿತರ ಪ್ರಾಕೃತಿಕ ವಿಕೋಪಗಳಿಗೆ ಕಾಸರಗೋಡಿನಲ್ಲಿರುವ ಅಗ್ನಿಶಾಮಕ ಕೇಂದ್ರವನ್ನೇ ಆಶ್ರಯಿಸಬೇಕಿದೆ. ಮೇಲೆ ತಿಳಿಸಿದಂತಹ ಸ್ಥಳಗಳಿಗೆ ಕಾಸರಗೋಡಿನಿಂದ ಸಂಚರಿಸಬೇಕಾದರೆ ಸುಮಾರು 30-60 ಕಿಲೋಮೀಟರ್ ತನಕ ದೂರ ಕ್ರಮಿಸಬೇಕಿದೆ. ಬದಿಯಡ್ಕ ಗ್ರಾ.ಪಂ.ನ ನಿಧರ್ಿಷ್ಟ ಸ್ಥಳದಲ್ಲಿ ಅಗ್ನಿಶಾಮಕ ಕೇಂದ್ರವನ್ನು ತೆರೆಯುವುದರಿಂದ 30 ಕಿ.ಮೀ.ಗಳಷ್ಟು ದೂರ ಕಡಿಮೆಯಾಗಲಿದೆ.
ಕಳೆದ ವಾರ ನೀಚರ್ಾಲು ಪುದುಕೋಳಿ, ಎರಟ್ಟಕಾಯಿರ ಭಾಗದಲ್ಲಿ ಅಗ್ನಿಬಾಧೆ ಸಂಭವಿಸಿದ ಸಂದರ್ಭದಲ್ಲಿ ಕಾಸರಗೋಡು ಕೇಂದ್ರದಿಂದ ಆಗಮಿಸುವ ವೇಳೆ ಸುಮಾರು 40 ಎಕ್ರೆಗಳಷ್ಟು ಗೇರುಬೀಜ, ಮುಳಿಹುಲ್ಲು ಹಾಗೂ ಇನ್ನಿತರ ಮರಗಿಡಗಳು ಹೊತ್ತಿ ಭಸ್ಮವಾಗಿದೆ. ತಡವಾಗಿಯಾದರೂ ಅಗ್ನಿಶಾಮಕ ವಾಹನ ಆಗಮಿಸಿರುವುದರಿಂದ ಹೆಚ್ಚಿನ ದುರಂತ, ಪ್ರಾಣಾಪಾಯ, ಮನೆಗಳಿಗೆ ಹಾನಿ ಸಂಭವಿಸಿರಲಿಲ್ಲ. ಆ ಪ್ರದೇಶದಲ್ಲಿ 20 ರಷ್ಟು ಮನೆಗಳು, ತೆಂಗು, ಅಡಿಕೆ ಹಾಗೂ ಇನ್ನಿತರ ಕೃಷಿಭೂಮಿಗಳು ನಾಶವಾಗುವುದು ಉಳಿಯಿತು. ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಲಭಿಸದೇ ಜನತೆ ಕಂಗಾಲಾಗಿದ್ದಾರೆ. ಇದೇ ವೇಳೆ ಇದೊಂದು ಮಳೆಗಾಲದ ನಂತರದ ಮೊದಲ ಅಗ್ನಿದುರಂತವಾಗಿದೆ. ಬಿಸಿಲ ಬೇಗೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಇನ್ನೂ ಅದೆಷ್ಟು ಅಗ್ನಿದುರಂತಗಳನ್ನು ನೋಡಬೇಕಾಗಿದೆಯೋ ಎಂದು ಸಾರ್ವಜನಿಕರು ಪರಿತಪಿಸುವಂತಾಗಿದೆ. ತಮ್ಮ ಪ್ರಾಣವನ್ನು ಒತ್ತಯಿಟ್ಟು ದಟ್ಟವಾಗಿ ಹಬ್ಬಿರುವ ಬೆಂಕಿಯನ್ನು ನಂದಿಸುವಲ್ಲಿ ಸಿಬ್ಬಂದಿಗಳು ಪ್ರಾಮಾಣಿಕವಾಗಿ ಪ್ರಯತ್ನಿಸಿ ಸಫಲರಾಗಿದ್ದರು. ಸಾರ್ವಜನಿಕರ ಹಿತದೃಷ್ಟಿಯಿಂದ ನೀಚರ್ಾಲಿನಲ್ಲಿ ಅಗ್ನಿಶಾಮಕ ದಳದ ಕೇಂದ್ರವನ್ನು ಆರಂಭಿಸಬೇಕೆಂದು ಈ ಮೂಲಕ ಬದಿಯಡ್ಕ ಗ್ರಾಮಪಂಚಾಯತ್ ಯೋಜನಾ ಸಮಿತಿಯ ಸದಸ್ಯ ಎಂ.ಎಚ್. ಜನಾರ್ಧನ ಆಗ್ರಹಿಸಿದ್ದಾರೆ.

