ಮುಳ್ಳೇರಿಯ: ಕಾನತ್ತೂರು ಶ್ರೀಶಾಸ್ತಾ ಮಹಾಲಿಂಗೇಶ್ವರ ಕ್ಷೇತ್ರದಲ್ಲಿ ವಾಷರ್ಿಕ ಜಾತ್ರೋತ್ಸವ ನ.29 ರಿಂದ ಡಿ.2ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ನ.29 ರಂದು ಬೆಳಿಗ್ಗೆ ಚಪ್ಪರ ಮುಹೂರ್ತ, ಸಂಜೆ ತಂತ್ರಿವರ್ಯರಿಗೆ ಸ್ವಾಗತ, 4.30ಕ್ಕೆ ಕಾನತ್ತೂರು ಪ್ರವಾಸಿ ಸಂಘಟನೆ ಕ್ಷೇತ್ರ ಪರಿಸರದಲ್ಲಿ ನೂತನವಾಗಿ ನಿಮರ್ಿಸಿರುವ ಪುಷ್ಪೋದ್ಯಾನವನವನ್ನು ತಂತ್ರಿವರ್ಯ ಇರವಿಲ್ ಕೇಶವ ತಂತ್ರಿಗಳು ಲೋಕಾರ್ಪಣೆಗೊಳಿಸುವರು. ಬಳಿಕ ಪ್ರಾರ್ಥನೆ, ಪಶುದಾನ ಪುಣ್ಯಾಹ, ಪ್ರಾಸಾದ ಶುದ್ದಿ, ಅಸ್ತ್ರಕಲಶ ಪೂಜೆ, ರಾಕ್ಷೊಘ್ನ ಹೋಮ, ವಾಸ್ತುಹೋಮ, ವಾಸ್ತುಕಲಶಪೂಜೆ, ವಾಸ್ತುಬಲಿ, ವಾಸ್ತು ಕಲಶಾಭಿಷೇಕ, 7ಕ್ಕೆ ಭಗವದ್ಗೀತಾ ಪಾರಾಯಣ, ಭಜನಾ ಸಂಕೀರ್ತನೆ, ರಾತ್ರಿಪೂಜೆ, ಪ್ರಸಾದ ವಿತರಣೆ, ಅನ್ನದಾನಗಳು ನಡೆಯಲಿವೆ.
ನ.30ರಂದು ಬೆಳಿಗ್ಗೆ ಗಣಪತಿ ಹವನ, ಉಷಃಪೂಜೆ, ಉಷಃಗೀತೆ, ಆಯುಧ ತೆಗೆಯುವುದು, ಪ್ರಸಾದ ವಿತರಣೆ, ತುಲಾಭಾರ ಸೇವೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನದಾನ, ಸಂಜೆ ದೀಪಾರಾಧನೆ, ತಾಯಂಬಕ, ಭಗವತಿ ಕಳ ರಚನೆ, ಗಣಪತಿ ಪೂಜೆ, ರಾತ್ರಿ ಪೂಜೆ, ಶ್ರೀಬಲಿ ಹೊರಡುವುದು, ಕಳಂಪೂಜೆ, ಭಜನಾ ಸಂಕೀರ್ತನೆ, ಅನ್ನದಾನಗಳು ನಡೆಯಲಿವೆ.
ಡಿ.1 ರಂದು ಬೆಳಿಗ್ಗೆ ಗಣಪತಿ ಹವನ, ಉಷಃಪೂಜೆ, ಉರ್ಷಗೀತೆ, ಶ್ರೀಬಲಿ ತೆಗೆಯುವುದು, ಕಲಶಪೂಜೆ, ಕಲಶಾಭಿಷೇಕ,ತುಲಾಭಾರ ಸೇವೆ, ಮಹಾಪೂಜೆ, ಬಳಿಕ ಮಧ್ಯಾಹ್ನದ ಗೀತೆ, ಶ್ರೀಬಲಿ ತೆಗೆಯುವುದು, ಪ್ರಸಾದ ವಿತರಣೆ, ಅನ್ನದಾನ, ಸಂಜೆ ದೀಪಾರಾಧನೆ, ತಾಯಂಬಕ, ಶಾಸ್ತಾನಿಗೆ ಕಳ ಬರೆಯುವುದು, ರಾತ್ರಿ ಪೂಜೆ, ಕಳಪ್ಪಾಟ್, ಶ್ರೀಭೂತಬಲಿ, ಪಂಚವಾದ್ಯ ಸೇವೆ, ನಾಗಪ್ಪಾಟ್, ವಸಂತಕಟ್ಟೆ ಪೂಜೆ, ತಿಡಂಬು ನೃತ್ಯ ಸೇವೆ, ಭಕ್ತಿಗಾನ ಮೇಳ ನಡೆಯಲಿದೆ. ಡಿ.2 ರಂದು ಬೆಳಿಗ್ಗೆ ನಡೆ ತೆರೆಯುವುದು, ಅಭಿಷೇಕ, ಉಷಃಪೂಜೆ, ಗಣಪತಿ ಹವನ, ಕಲಶಪೂಜೆ, ಶ್ರೀಬಲಿ ಏಳುವುದು, ದರ್ಶನ ಬಲಿ, ರಾಜಾಂಗಣ ಪ್ರಸಾದ ವಿತರಣೆ, ಕಲಶಾಭಿಷೇಕ, ಮಂತ್ರಾಕ್ಷತೆವಿತರಣೆ, ತುಲಾಭಾರ ಸೇವೆ, ಮಹಾಪೂಜೆ, ಕಳಗಂ ಒಪ್ಪಿಸುವುದು ಹಾಗೂ ಬಳಿಕ ಅನ್ನದಾನಗಳೊಂದಿಗೆ ಉತ್ಸವ ಸಂಪನ್ನಗೊಳ್ಳಲಿದೆ.


