ಕುಂಬಳೆ: ಕೇರಳ ರಾಜ್ಯ ಯುವಜನ ಆಯೋಗ, ರಾಜ್ಯ ಮ್ಯಾಜಿಕ್ ಅಕಾಡೆಮಿ ಸಹಯೋಗದಲ್ಲಿ ಮೈ ಕೇರಳ ವಿಚಾರಗೋಷ್ಠಿ ಮತ್ತು ಕಾಯರ್ಾಗಾರ ನ.31 ರಂದು ನಡೆಯಲಿದೆ. ಕಾಞಂಗಾಡು ನಗರಸಭಾಂಗಣದಲ್ಲಿ ಆಯೋಜಿಸಲ್ಪಡುವ ವಿಚಾರಗೋಷ್ಠಿಯಲ್ಲಿ ಮಾದಕ ವಸ್ತುಗಳ ವಿರುದ್ಧ ಜನಜಾಗೃತಿ, ಸೈಬರ್ ಜಾಲದಲ್ಲಿ ನಡೆಯುವ ಸಮಾಜ ಬಾಹಿರ ಕೃತ್ಯಗಳನ್ನು ತಡೆಯುವ ಬಗ್ಗೆ ಮಾಹಿತಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಖ್ಯಾತ ಜಾದೂಗಾರ ಗೋಪೀನಾಥ್ ಮುತುಕ್ಕಾಡ್ ಅವರಿಂದ ಇಂದ್ರಜಾಲ ಪ್ರದರ್ಶನದ ಮೂಲಕ ಮಾದಕ ವಸ್ತುಗಳ ದುಷ್ಪರಿಣಾಮದ ಬಗ್ಗೆ ಬೆಳಕು ಚೆಲ್ಲಲಾಗುವುದು. ಮಾದಕ ವಸ್ತುಗಳಿಂದ ವಿಮುಕ್ತಿ ಎಂಬ ಸಂದೇಶ ನೀಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.
ಕಾರ್ಯಕ್ರಮವನ್ನು ಸಂಸದ ಪಿ.ಕರುಣಾಕರನ್ ಉದ್ಘಾಟಿಸುವರು. ರಾಜ್ಯ ಯುವಜನ ಆಯೋಗದ ಅಧ್ಯಕ್ಷ ಚಿಂತಜೆರೋ, ಜಿಲ್ಲಾಧಿಕಾರಿ ಡಾ.ಡಿ. ಸಜಿತ್ ಬಾಬು, ಪೋಲಿಸ್ ಮುಖ್ಯಸ್ಥ ಕೆ.ಎಂ.ಟೋಮಿ, ನಗರಸಭಾ ಅಧ್ಯಕ್ಷ ವಿ.ವಿ.ರಮೇಶನ್, ರಾಜ್ಯ ಯುವಜನ ಆಯೋಗದ ಸದಸ್ಯ ಕೆ.ಮಣಿಕಂಠನ್ ಮೊದಲಾದವರು ಶುಭಾಶಂಸನೆಗೈಯ್ಯುವರು.

