ಬದಿಯಡ್ಕ: ಜಿಲ್ಲಾಧಿಕಾರಿಗಳ ಕಾಯರ್ಾಲಯದ ಮುಂದೆ ಹಾದುಹೋಗುವ ವಿದ್ಯಾನಗರ-ಮಾನ್ಯ-ನೀಚರ್ಾಲು ರಸ್ತೆಯ ಕಾಮಗಾರಿಯಲ್ಲಿ ಭಾರೀ ವಂಚನೆ ನಡೆದಿರುವುದಾಗಿ ಸಂಶಯಿಸಲಾಗಿದೆ.
ಈ ರಸ್ತೆಯ ಶೋಚನೀಯಾವಸ್ಥೆಯನ್ನು ಪರಿಗಣಿಸಿ ಜಿಲ್ಲಾ ಪಂಚಾಯತು 5.6 ಕೋಟಿ ರೂಗಳ ಯೋಜನೆ ರೂಪಿಸಿ ಕಳೆದ ಒಮದು ತಿಂಗಳುಗಳಿಂದ ಕಾಮಗಾರಿ ನಡೆಯುತ್ತಿತ್ತು. ಆರಂಭಿಕ ಹಂತದಲ್ಲಿ ವಿದ್ಯಾನಗರದಿಂದ ಕಲ್ಲಕಟ್ಟದವರೆಗೆ ಮೆಕ್ಕಾಡಾಂ ಡಾಮರೀಕರಣ ನಡೆಸಲಾಗಿದ್ದು, ಶನಿವಾರ ಕಾಮಗಾರಿ ಪೂತರ್ಿಯಾಯಿತೆಂದು ಕಾಮರ್ಿಕರು ಹಿಂತಿರುಗಿದ್ದರು. ಆದರೆ ರಸ್ತೆಯ ಅಲ್ಲಲ್ಲಿ ಹೊಂಡಗಳು ಕಂಡುಬಂದಿದ್ದರಿಂದ ಕುಪಿತರಾದ ನಾಗರಿಕರು ಈ ಬಗ್ಗೆ ಹೋರಾಟದ ಮುನ್ನೆಚ್ಚರಿಕೆ ನೀಡಿದರು.
ಮಂಗಳವಾರ ಕಾಮಗಾರಿಯ ಲೋಪಗಳನ್ನು ಸರಿಪಡಿಸಲು ಆಗಮಿಸಿದ ಕಾಮರ್ಿಕರು ಕರಿ ಓಯಿಲ್ ನ್ನು ರಸ್ತೆಗೆ ಬಳಿದು ಕಣ್ಣಿಗೆ ಮಣ್ಣೆರಚಲು ಯತ್ನಿಸುತ್ತಿರುವುದನ್ನು ಗಮನಿಸಿದ ರಸ್ತೆ ಹೋರಾಟ ಕ್ರಿಯಾ ಸಮಿತಿಯ ಸದಸ್ಯರು ಬಾರಿಕ್ಕಾಡಿನಲ್ಲಿ ಕಾಮಗಾರಿಗೆ ತಡೆಯೊಡ್ಡಿದರು. ಬಳಿಕ ರಸ್ತೆ ನಿಮರ್ಾಣದ ಗುತ್ತಿಗೆ ವಹಿಸಿದವರು ಅಲ್ಲಿಂದ ಪಲಾಯನಗೈದಿದ್ದು, ಇದು ಕ್ರಿಯಾ ಸಮಿತಿಯ ಸದಸ್ಯರನ್ನು ಕೆರಳಿಸಿತು. ಕೂಡಲೇ ಅಗತ್ಯ ಮಾನದಂಡಗಳೊಂದಿಗೆ ಸಂಬಂಧ ಪಟ್ಟ ಅಧಿಕೃತರು ರಸ್ತೆಯ ಸಮರ್ಪಕ ಕಾಮಗಾರಿ ನಡೆಸಬೇಕು.ಇಲ್ಲದಿದ್ದಲ್ಲಿ ವಿಜಿಲೆನ್ಸ್ ಗೆ ದೂರು ನೀಡುವುದಾಗಿ ಎಚ್ಚರಿಕೆ ನೀಡಿದೆ.
ಅಪರಾಹ್ನ ಜಿಲ್ಲಾ ಪಂಚಾಯತು ಅಧಿಕೃತರು, ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿರುವರು.


