ಕಾಸರಗೋಡು: ಕೇರಳದಲ್ಲಿ ದುಡಿಯುತ್ತಿರುವ ಬೇರೆ ರಾಜ್ಯಗಳ ಕಾಮರ್ಿಕರ ಆರೋಗ್ಯ ಮತ್ತು ಸಂರಕ್ಷಣೆಗಾಗಿ ರಾಜ್ಯ ಸರಕಾರ ಅನುಷ್ಠಾನಗೊಳಿಸುತ್ತಿರುವ ವಿಮಾಯೋಜನೆ ಆವಾಜ್ ಯೋಜನೆಯಿಂದ ಸೌಲಭ್ಯ ಪಡೆಯುವ ನಿಟ್ಟಿನಲ್ಲಿ ನಾಳೆ (ನ.29)ಯಿಂದ ಡಿ.5 ವರೆಗೆ ವಿಶೇಷ ಡ್ರೈವ್ನ ಅಂಗವಾಗಿ ಜಿಲ್ಲೆಯ ವಿವಿಧೆಡೆಗ ಶಿಬಿರ ಜರುಗಲಿದೆ.
ಆವಾಜ್ ಯೋಜನೆಯ ಸದಸ್ಯರಾಗುವ ಕಾಮರ್ಿಕರಿಗೆ ಪ್ರತಿವರ್ಷ 15 ಸಾವಿರ ರೂ.ವರೆಗಿನ ಉಚಿತ ಚಿಕಿತ್ಸೆ, ಅಪಘಾತ ಮರಣ ಸಂಭವಿಸಿದಲ್ಲಿ 2 ಲಕ್ಷ ರೂ.ನ ವಿಮಾ ಸೌಲಭ್ಯ ಲಭಿಸಲಿದೆ. 18ರಿಂದ 60 ವರ್ಷ ಪ್ರಾಯ ವರೆಗಿನ ಇತರ ರಾಜ್ಯಗಳ ಕಾಮರ್ಿಕರು ಈ ಯೋಜನೆಯಲ್ಲಿ ಸದಸ್ಯರಾಗಬಹುದು. ಕಾಸರಗೋಡು ಜನರಲ್ ಆಸ್ಪತ್ರೆ, ಕಾಞಂಗಾಡು ಜಿಲ್ಲಾ ಆಸ್ಪತ್ರೆಗಳಲ್ಲಿ ಈ ಯೋಜನೆಯ ಕಾಡರ್? ಬಳಸಿ ಚಿಕಿತ್ಸಾ ಸೌಲಭ್ಯ ಪಡೆಯಬಹುದು. ಈಗ ಜಿಲ್ಲೆಯಲ್ಲಿ ಮಾತ್ರ 9500 ಮಂದಿ ಕಾಮರ್ಿಕರು ಈ ಯೋಜನೆಯ ಸದಸ್ಯರಾಗಿ ಬಯೋಮೆಟ್ರಿಕ್ ಕಾರ್ಡು ಪಡೆದುಕೊಂಡಿದ್ದಾರೆ.
29ರಂದು ಪರೋಪ್ಪಾಡ್, ವಲಿಯಪೊಯಿಲ್, ಪಡನ್ನ ಪ್ರದೇಶಗಳಲ್ಲಿ, 30ರಂದು ಚೀಮೇನಿ, ಮಡಿಕೈ ಹಾರ್ಬರ್, ನೀಲೇಶ್ವರ ಬ್ಲೋಕ್ ಕಚೇರಿ ಬಳಿ, ಡಿ.1ರಂದು ಕಾಞಂಗಾಡು ನಗರಸಭೆ, ಕಾಞಂಗಾಡು ರೈಲುನಿಲ್ದಾಣ, ಬಾವಿಕ್ಕರ,2ರಂದು ಚೆರ್ಕಳ, ಮೇಲ್ಪರಂಬ,ಉದುಮಾ, ಕಾಸರಗೋಡು ಹೊಸಬಸ್ ನಿಲ್ದಾಣ, 3ರಂದು ಚಟ್ಟಂಚಾಲ್, ಕುಂಡಂಕುಳಿ, ಪೆರಿಯ, 4ರಂದು ಮಾಣೀಕೋತ್, ಪಳ್ಳಿಕ್ಕರೆ, ಬೇಕಲ್ ಕೋಸ್ಟಲ್, 5ರಂದು ಮಂಜೇಶ್ವರ ಪೇಟೆ, ಕುಂಜತ್ತೂರು, ಉಪ್ಪಳ ಪ್ರದೇಶಗಳಲ್ಲಿ ಶಿಬಿರ ನಡೆಯಲಿವೆ. ಕೇಂದ್ರ-ರಾಜ್ಯ ಸರಕಾರಿ ಅಂಗೀಕೃತ ಯಾವುದೇ ಗುರುತುಚೀಟಿ ಸಹಿತ ಎನ್ರೋಲ್ ಕೇಂದ್ರಕ್ಕೆ ಕಾಮರ್ಿಕರು ಹಾಜರಾಗಬಹುದು. ಹೆಚ್ಚಿನ ಮಾಹಿತಿಗೆ 04994-256950, 04994-257850, 0467-2204602 ದೂರವಾಣಿ ಸಂಖ್ಯೆಯನ್ನು ಸಂಪಕರ್ಿಸಬಹುದು.


