ಕಾಸರಗೋಡು: ಪರಿಶಿಷ್ಟ ಜಾತಿ-ಪಂಗಡ ಅಭಿವೃದ್ಧಿ ಇಲಾಖೆ, ಕಿತಾಡ್ಸ್ ಸಂಸ್ಥೆಗಳು ಜಂಟಿಯಾಗಿ ಡಿ.22ರಿಂದ 30 ವರೆಗೆ ಕಾಲಿಕಡವು ಮೈದಾನದಲ್ಲಿ ನಡೆಸುವ ಗದ್ದಿಕ-2018 ಸಾಂಸ್ಕೃತಿಕ ಪ್ರದರ್ಶನ , ಮಾರಾಟ ಮೇಳ ಸಂಬಂಧ ವಿವಿಧ ಸಂಘಟಕ ಸಮಿತಿಗಳ ಪದಾಧಿಕಾರಿಗಳ ಸಭೆ ಇಂದು (28-11-2018)ರಂದು ಬೆಳಗ್ಗೆ 9.30ಕ್ಕೆ ಪರಪ್ಪ ಬ್ಲಾಕ್ ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ. ಗದ್ದಿಕ ಪ್ರಧಾನ ಸಂಚಾಲಕ, ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ನೇತೃತ್ವ ವಹಿಸುವರು.
ಡಿ.1ರಂದು ಸಭೆ : ಇದೇ ವಿಚಾರದ ಉಪಸಮಿತಿಗಳ ಸಭೆ ಡಿ.1ರಂದು ಮಧ್ಯಾಹ್ನ 2 ಗಂಟೆಗೆ ಪಿಲಿಕೋಡ್ ಗ್ರಾಮಪಂಚಾಯತ್ ಅನೆಕ್ಸ್ ಸಭಾಂಗಣದಲ್ಲಿ ಜರುಗಲಿದೆ.


