HEALTH TIPS

ನಾಳೆ ಬದಿಯಡ್ಕದಲ್ಲಿ ಜನೌಷಧಿ ಕೇಂದ್ರ ಆರಂಭ

           
    ಬದಿಯಡ್ಕ: ಜಿಲ್ಲೆಯ 2ನೆಯ `ಪ್ರಧಾನಮಂತ್ರಿ ಭಾರತೀಯ ಜನಔಷಧಿ ಕೇಂದ್ರ'ವು ಬದಿಯಡ್ಕ ಶೆಣೈ ಸಿಟಿಸೆಂಟರ್ನಲ್ಲಿ ನ.29ರಂದು ಬೆಳಿಗ್ಗೆ 10 ಗಂಟೆಗೆ ಉದ್ಘಾಟನೆಗೊಳ್ಳಲಿದೆ. ತನ್ಮೂಲಕ ಬದಿಯಡ್ಕ ಪರಿಸರದ ಜನತೆಗೂ ಭಾರತ ಸರಕಾರದ ಯೋಜನೆ ಲಭ್ಯವಾಗಲಿದೆ.
ಬದಿಯಡ್ಕ ಗ್ರಾಮಪಂಚಾಯತಿ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಅಧ್ಯಕ್ಷತೆಯಲ್ಲಿ, ಜಿಲ್ಲಾ ಪಂಚಾಯತಿ ಸದಸ್ಯ ನ್ಯಾಯವಾದಿ ಕೆ.ಶ್ರೀಕಾಂತ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬದಿಯಡ್ಕ ಸೈಂಟ್ ಮೇರೀಸ್ ಚಚರ್್ನ ಫಾ. ಜೋಸೆಫ್ ಈನಾಚೇರಿಲ್, ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಶಂಕರನಾರಾಯಣ ಮಯ್ಯ ಬದಿಯಡ್ಕ, ವಿವೇಕಾನಂದ ಪೊಲಿಟೆಕ್ನಿಕ್, ಪುತ್ತೂರು ಇದರ ಆಡಳಿತ ಸಮಿತಿಯ ಅಧ್ಯಕ್ಷ ಪ್ರಸನ್ನ ಎನ್. ಭಟ್ ಪಾಲ್ಗೊಳ್ಳಲಿದ್ದಾರೆ. ಬದಿಯಡ್ಕ ಶೆಣೈ ಸಿಟಿ ಸೆಂಟರ್ ಮ್ಹಾಲಕ ನಿತ್ಯಾನಂದ ಶೆಣೈ ಪ್ರಥಮ ಖರೀದಿ ಮಾಡುವರು.ಬ್ಲಾಕ್ ಪಂಚಾಯತ್ ಸದಸ್ಯ ಅವಿನಾಶ್ ರೈ ಬದಿಯಡ್ಕ, ಬದಿಯಡ್ಕ ಗ್ರಾ.ಪಂ.ಸ್ಥಾಯೀ ಸಮಿತಿ ಅಧ್ಯಕ್ಷ ಅನ್ವರ್ ಓಸೋನ್, ಸದಸ್ಯ ಮುನೀರ್ ಶುಭಾಶಂಸನೆಗೈಯ್ಯುವರು. ಎಂದು ಮ್ಹಾಲಕ ಕುಮಾರ್ ಎಸ್. ಪೈಸಾರಿ ತಿಳಿಸಿದ್ದಾರೆ.
   ಕೋಟ್ಸ್:
``ಬಡವರಿಗೆ ಎಟಕುವ ಬೆಲೆಯಲ್ಲಿ ಔಷಧಿಗಳು ಲಭ್ಯವಿರುವಂತಾಗಬೇಕು, ಔಷಧಿಗಳು ಸಿಗಲಿಲ್ಲ ಅಥವಾ ಔಷಧಿ ಕೊರತೆಯಿಂದಾಗಿ ಬಡವರು ಪ್ರಾಣ ಕಳೆದುಕೊಳ್ಳುವಂತಾಗಬಾರದು. ಅದಕ್ಕಾಗಿಯೇ ದೇಶದಾದ್ಯಂತ ಜನಔಷಧಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.'' ಎಂಬ ಉದ್ದೇಶದಿಂದ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತ ಸರಕಾರ ತೆರೆದಿರುವ `ಪ್ರಧಾನಮಂತ್ರಿ ಭಾರತೀಯ ಜನಔಷಧಿ ಕೇಂದ್ರ'ದಲ್ಲಿ ಬಿ.ಪಿ., ಶುಗರ್, ಹೃದಯ ಖಾಯಿಲೆ, ಗ್ಯಾಸ್ ಟ್ರಬಲ್ ಹಾಗೂ ಇತರ ಅನೇಕ ಔಷಧಗಳು ಶೇಕಡಾ 80ರ ವರೆಗೆ ರಿಯಾಯಿತಿ ದರದಲ್ಲಿ ದೊರೆಯುತ್ತದೆ.
   ಗ್ರಾಮೀಣ ಭಾಗದ ಜನತೆಗೂ ಕೈಗೆಟಕುವ ದರದಲ್ಲಿ ಔಷಧಿಗಳು ಲಭಿಸಬೇಕು ಎನ್ನುವ ಸದುದ್ದೇಶವನ್ನಿಟ್ಟುಕೊಂಡು ಬದಿಯಡ್ಕ ಆರಂಭಿಸಲು ತೀಮರ್ಾನಿಸಲಾಗಿದೆ. - ಕುಮಾರ್ ಎಸ್. ಪೈಸಾರಿ, ಬದಿಯಡ್ಕ
   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries