ಪೆರ್ಲ:ಬೇಂಗಪದವು ಶ್ರೀ ಗಿರಿಜಾಂಬ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನ. 30 ರಂದು ರಕ್ಷಕ ಶಿಕ್ಷಕ ಸಂಘದ ಆಶ್ರಯದಲ್ಲಿ ಪ್ರಾಚ್ಯ ವಸ್ತುಗಳ ಪ್ರದರ್ಶನ ನಡೆಯಲಿದೆ.
ಹಿಂದಿನ ಕಾಲದ ಜನರ ಜೀವನ ಕ್ರಮ, ಕೃಷಿ ಪದ್ಧತಿ, ವ್ಯಾಪಾರ ವ್ಯವಹಾರ ಮೊದಲಾದವುಗಳನ್ನು ವಿದ್ಯಾಥರ್ಿಗಳಿಗೆ ಹಾಗೂ ಸ್ಥಳೀಯರಿಗೆ ಪರಿಚಯಿಸುವ ಸಲುವಾಗಿ ನಡೆಯುವ ಕಾರ್ಯಕ್ರಮವನ್ನು ಕುಂಬಳೆ ಉಪ ಜಿಲ್ಲಾ ಸಹಾಯಕ ಶಿಕ್ಷಣಾಧಿಕಾರಿ ಕೈಲಾಸಮೂತರ್ಿ ಉದ್ಘಾಟಿಸಲಿದ್ದು ಎಣ್ಮಕಜೆ ಗ್ರಾ.ಪಂ.ಸದಸ್ಯ ಉದಯ ಚೆಟ್ಟಿಯಾರ್ ಬಜಕೂಡ್ಲು ಅಧ್ಯಕ್ಷತೆ ವಹಿಸುವರು. ಪಂಚಾಯಿತಿ ಆರೋಗ್ಯ ಶಿಕ್ಷಣ ಸ್ಥಾಯೀ ಸಮಿತಿ ಅಧ್ಯಕ್ಷೆ ಆಯಿಷಾ ಎ.ಎ., ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಕೆ., ಮಾತೃ ಸಂಘದ ಅಧ್ಯಕ್ಷೆ ರೇಖಾ ಕೆ.ಎಸ್. ಉಪಸ್ಥಿತರಿರುವರು.ಸ್ಥಳೀಯ ಶಾಲೆಗಳ ಆಸಕ್ತ ವಿದ್ಯಾಥರ್ಿಗಳು ಅಧ್ಯಾಪಕರೊಂದಿಗೆ ಆಗಮಿಸಿ ವಸ್ತು ಪ್ರದರ್ಶನ ವೀಕ್ಷಿಸಬಹುದಾಗಿದೆ.

