ಪೆರ್ಲ:ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಸರಗೋಡು ತಾಲೂಕು ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಪೆರ್ಲ ಮತ್ತು ಶ್ರೀ ದುಗರ್ಾ ಪರಮೇಶ್ವರಿ ಭಜನಾ ಮಂದಿರ ಏತಡ್ಕ ಸಂಯುಕ್ತಾಶ್ರಯದಲ್ಲಿ ಡಿ.1ರಂದು ಸಾಮೂಹಿಕ ಶ್ರೀ ಶನೈಶ್ಚರ ಪೂಜೆ, ಮಹಿಳಾ ಜ್ಞಾನ ವಿಕಾಸ ವಾಷರ್ಿಕೋತ್ಸವ ನಡೆಯಲಿದೆ.
ಬೆಳಗ್ಗೆ 7ಗಂಟೆಗೆ ಪೂಜಾರಂಭ, 9ರಿಂದ ಭಜನೆ, 10ಗಂಟೆಗೆ ಮಹಾಪೂಜೆ, 10.30ಕ್ಕೆ ಧಾಮರ್ಿಕ ಸಭಾ ಕಾರ್ಯಕ್ರಮದಲ್ಲಿ ಭಜನಾ ಮಂದಿರದ ಅಧ್ಯಕ್ಷ ಬಾಲಕೃಷ್ಣ ಕೆ.ಕೆ. ಅಧ್ಯಕ್ಷತೆ ವಹಿಸಲಿದ್ದು ಏತಡ್ಕ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ರವಿರಾಜ ಶರ್ಮ ಕುದಿಂಗಿಲ ಧಾಮರ್ಿಕ ಉಪನ್ಯಾಸ ನೀಡಲಿದ್ದಾರೆ.ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾನವ ಸಂಪನ್ಮೂಲ ವಿಭಾಗ ನಿದರ್ೇಶಕಿ ಮಮತಾ ಹರೀಶ್ ರಾವ್, ಯೋಜನಾಧಿಕಾರಿ ಚೇತನಾ ಎಂ., ಜನ ಜಾಗೃತಿ ಸದಸ್ಯ ಸುಮಿತ್ ರಾಜ್, ಏತಡ್ಕ ಶಾಲಾ ಮುಖ್ಯ ಶಿಕ್ಷಕಿ ಸರೋಜ ಪಿ. ಮೊದಲಾದವರು ಭಾಗವಹಿಸುವರು.
ಮಧ್ಯಾಹ್ನ 12.30ಕ್ಕೆ ಪ್ರಸಾದ ವಿತರಣೆ, 1ರಿಂದ ಅನ್ನ ಸಂತರ್ಪಣೆ ನಡೆಯಲಿದೆ.

