ಉಪ್ಪಳ: ಚಿಪ್ಪಾರು ಹಿಂದೂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸದ ಅಂಗವಾಗಿ ಆಯೋಜಿಸಲಾದ ಸರಣಿ ಕಾರ್ಯಕ್ರಮಗಳ ಅಂಗವಾಗಿ ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನದ ಆಶ್ರಯದಲ್ಲಿ ಕೆ.ಯಂ.ಸಿ ಆಸ್ಪತ್ರೆ ಮಂಗಳೂರು, ಲೇಡಿಗೋಷನ್ ಆಸ್ಪತ್ರೆ ಮಂಗಳೂರು, ವೇದಂ ಆಯರ್ುವೇದ ಕಾಲೇಜು ಇವುಗಳ ಸಹಕಾರದೊಂದಿಗೆ ಉಚಿತ ದಂತ ಚಿಕಿತ್ಸಾ ಶಿಬಿರ-ಆಯರ್ುವೇದ ವೈದಕೀಯ ಶಿಬಿರ ಮತ್ತು ರಕ್ತದಾನ ಶಿಬಿರವು ಇತ್ತೀಚೆಗೆ ನಡೆಯಿತು.
ಹಾಟರ್್ಕ್ಯಾರ್ ಸೆಂಟರ್, ಮಲಬಾರ್ ಹಾಸ್ಪಿಟಲ್ ಇದರ ಪ್ರಸಿದ್ಧ ಹೃದಯ ತಜ್ಞ ಡಾ.ಕುಂಞಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಉತ್ತಮ ಶಿಕ್ಷಣವು ವ್ಯಕ್ತಿಯನ್ನು ಉತ್ತಮ ಮನುಷ್ಯನನ್ನಾಗಿ ರೂಪೀಕರಿಸಬಲ್ಲದು. ಕಲಿಕೆಯು ಮಗುವಿನ ಮನಸ್ಸನ್ನು ಹೊಂದಿಕೊಂಡು ಮುಂದುವರಿಯುವುದು. ಅದಕ್ಕಾಗಿ ಸತತ ಪ್ರಯತ್ನದ ಅಗತ್ಯವಿದೆ ಎಂದು ತಿಳಿಸಿದರು. ತಾನು ಕಲಿತ ಶಾಲೆಗೆ ಆಥರ್ಿಕ ಸಹಾಯವನ್ನು ಘೋಶಿಸುವ ಮೂಲಕ ಕೃತಕ್ಷತಾ ಭಾವವನ್ನು ಪ್ರಕಟ ಪಡಿಸಿದರು.
ಶಾಲಾ ಪ್ರಬಂಧಕ ಕೆ.ಗಂಗಾಧರ ಬಲ್ಲಾಳ್ ಅಧ್ಯಕ್ಷತೆ ವಹಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಬ್ಯಾಂಕ್ ನಿದೇಶಕ ಟಿ.ಜಿ.ರಾಜಾರಾಮ್ ಭಟ್, ಡಾ.ಕೆ. ಪಿ. ಹೊಳ್ಳ, ಡಾ.ಕೇಶವರಾಜ್, ಡಾ. ಮುರಳಿ ಮೋಹನ್ ಚೂಂತಾರು, ಡಾ.ಶಿವರಾಮ ಭಟ್, ಡಾ.ಅಬ್ದುಲ್ ಫಜಲ್, ಎಡ್ವಡರ್್, ಪೂಪಪ್ಪ ಮುನ್ನಿಪ್ಪಾಡಿ, ರಝಿಯಾ ಅಬ್ದುಲ್ ರಝಾಕ್, ಅಂದುಂಞಿ ಹಾಜಿ ಶಿರಂತಡ್ಕ, ತಿರುಮಲೇಶ್ವರ ಭಟ್ ಚಿಪ್ಪಾರು ಪೆರ್ಲ, ಸೀತಾರಾಮ ಬಲ್ಲಾಲ್, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಖಲೀಲ್ ನಾರ್ಣಕಟ್ಟೆ, ಮಾತೃಸಂಘದ ಅಧ್ಯಕ್ಷೆ ಜಯಲಕ್ಷ್ಮಿ ಉಪಸ್ಥಿತರಿದ್ದು ಶುಭ ಹಾರೈಸಿದರು. ಶಾಲಾ ವಿದ್ಯಾಥರ್ಿನಿಯರ ಪ್ರಾಥನೆಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯ ದಾಸಪ್ಪ ಕೆ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ರಾಮಕೃಷ್ಣ ಬಲ್ಲಾಳ್ ವಂದಿಸಿದರು. ಶೇಖರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.


