ಮುಳ್ಳೇರಿಯ : ಅಡೂರಿನ ಶ್ರೀಪ್ರಿಯಾ ಮಹಿಳಾ ಭಜನಾ ಮಂಡಳಿಯ ಸದಸ್ಯರು ಸೋಮವಾರ ಪುತ್ತೂರಿನಲ್ಲಿ ನಡೆದ ಭಜನಾ ಕಾರ್ಯಕ್ರಮದಲ್ಲಿ ದ್ವಿತೀಯ ಬಹುಮಾನ ಪಡೆದಿದ್ದಾರೆ.
ಪುತ್ತೂರು ಬೊಳುವಾರಿನ ವೈದೇಹಿ ಮತ್ತು ವೈಷ್ಣವಿ ಮಹಿಳಾ ಭಜನಾ ಮಂಡಳಿಯ ಆಶ್ರಯದಲ್ಲಿ ಪುತ್ತೂರಿನ ನಟರಾಜ ವೇದಿಕೆಯಲ್ಲಿ ನಡೆದ ಕನಕ ಜಯಂತಿ ಆಚರಣೆ ಹಾಗೂ 6ನೇ ವಾಷರ್ಿಕೋತ್ಸವ ಸಮಾರಂಭದ ಸಂದರ್ಭದಲ್ಲಿ ದ್ವಿತೀಯ ಬಹುಮಾನ ಪಡೆದಿದ್ದಾರೆ. ಈ ತಂಡದಲ್ಲಿ ಪ್ರೇಮಾ ಎಂ ಬಾರಿತ್ತಾಯ, ಪದ್ಮ ಆರ್ ಬಾರಿತ್ತಾಯ, ಜಯಲಕ್ಷ್ಮಿ ವಿರಾಜ್ ಅಡೂರು, ಪುಷ್ಪಾ ಸರಳಾಯ, ಚಂಚಲಾ ಸರಳಾಯ, ವಿದ್ಯಾ ಕಲ್ಲಡೆ, ಆಶಾ ರವಿರಾಜ್ ಕೇಕುಣ್ಣಾಯ ಆಲಂತಡ್ಕ, ಆಶಾ ವೆಂಕಟ್ರಾಜ್ ಅಡೂರು, ಸತ್ಯವತಿ ಕಲ್ಲೂರಾಯ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಕಾಸರಗೋಡು ಜಿಲ್ಲೆಯೂ ಸೇರಿದಂತೆ ಅನೇಕ ಪ್ರದೇಶಗಳಿಂದ ಸುಮಾರು 30ಕ್ಕೂ ಮಿಕ್ಕಿದ ವಿವಿಧ ಮಹಿಳಾ ಭಜನಾ ತಂಡದ ಸದಸ್ಯರು ಭಾಗವಹಿಸಿದ್ದರು. ಅಡೂರಿನ ಶ್ರೀಪ್ರಿಯಾ ಮಹಿಳಾ ಭಜನಾ ಮಂಡಳಿಗೆ ಖ್ಯಾತ ದಾಸ ಸಂಕೀರ್ತನಕಾರರಾದ ರಾಮಕೃಷ್ಣ ಕಾಟುಕುಕ್ಕೆ ಮಾರ್ಗದರ್ಶನ ಮಾಡಿದ್ದಾರೆ. ಹಿಮ್ಮೇಳದಲ್ಲಿ ಸಾಯಿರಾಂ ಪುತ್ತೂರು (ತಬಲ) ಹಾಗೂ ಬಳ್ಳಪದವು ನಟರಾಜ ಶರ್ಮ(ಕೀಬೋಡರ್್) ಸಹಕರಿಸಿದ್ದರು.


