ಬಜಕೂಡ್ಲು ಫೆ.16 : 65ಕೆ.ಜಿ. ವಿಭಾಗ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟ
0
ಡಿಸೆಂಬರ್ 20, 2018
ಪೆರ್ಲ: ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ಆಟ್ಸರ್್ ಮತ್ತು ಸ್ಪೋಟ್ಸರ್್ ಕ್ಲಬ್ ವತಿಯಿಂದ 65ಕೆ.ಜಿ. ವಿಭಾಗದ ಪುರುಷರ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟ ಫೆಬ್ರವರಿ 16ರಂದು ಬಜಕೂಡ್ಲು ಮೈದಾನದಲ್ಲಿ ಜರಗಲಿದೆ. ವಿಜೇತ ತಂಡಗಳಿಗೆ ಪ್ರಥಮ ನಗದು 15019, ದ್ವಿತೀಯ 8019, ತೃತೀಯ ಹಾಗೂ ಚತುರ್ಥ ಬಹುಮಾನ ತಲಾ 4019ರೂ. ಶಾಶ್ವತ ಫಲಕ ಹಾಗೂ ವೈಯಕ್ತಿಕ ಬಹುಮಾನ ನೀಡಲಾಗುವುದು.
ಪಂದ್ಯಾಟದಂದು ಪೂರ್ವಭಾವಿಯಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಸಾಧಕರಿಗೆ ಸಮ್ಮಾನ, ಸ್ಮರಣ ಸಂಚಿಕೆ ಬಿಡುಗಡೆ ಸಮಾರಂಭ ನಡೆಯಲಿದೆ.
ಕಬಡ್ಡಿ ಪಂದ್ಯಾಟದ ಯಶಸ್ವಿಗಾಗಿ ಕ್ಲಬ್ಬಿನ ವತಿಯಿಂದ ಸಮಾಲೋಚನಾ ಸಭೆ ಕ್ಲಬ್ ಕಚೇರಿಯಲ್ಲಿ ಜರುಗಿತು. ಕ್ಲಬ್ಬಿನ ಅಧ್ಯಕ್ಷ ರಾಜೇಶ್ ಮಾಸ್ಟರ್ ಅಧ್ಯಕ್ಷತೆ ವಹಿಸಿದ್ದರು. ಕ್ಲಬ್ಬಿನ ಪೋಷಕ, ಮಾಜಿ ಅಧ್ಯಕ್ಷ ಶಿವಾನಂದ ಪೆರ್ಲ ಮಾರ್ಗದರ್ಶನ ನೀಡಿದರು. ಕಳೆದ ಮೂವತ್ತು ವರ್ಷಕ್ಕೂ ಹೆಚ್ಚು ಕಾಲದಿಂದ ಕ್ಲಬ್ ಕ್ರೀಡಾ, ಸಾಮಾಜಿಕ, ಸಾಂಸ್ಕೃತಿಕ, ಧಾಮಿರ್ಕ ರಂಗಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಈ ಬಗ್ಗೆ ಬೆಳಕು ಚೆಲ್ಲುವ ಅಪೂರ್ವ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ವಿವಿಧ ಉಪಸಮಿತಿಯನ್ನು ರಚಿಸಲಾಯಿತು.
ಹಿರಿಯ ಸದಸ್ಯ ರಾಮಣ್ಣ ಬಿ.ಸಿ, ಕಾರ್ಯದಶರ್ಿ ಸುಜಿತ್ ರೈ ಬಜಕೂಡ್ಲು, ದಾಮೋದರ ಬಜಕೂಡ್ಲು, ಹರೀಶ್ ರೈ ಪರ್ಪಕರಿಯ, ಪದ್ಮನಾಭ ಸುವರ್ಣ, ನಾರಾಯಣ ಅಮೆಕ್ಕಳ, ಜಯಂತ ನಾಯ್ಕ್ ಸಲಹೆ, ಸೂಚನೆ ನೀಡಿದರು.


