HEALTH TIPS

ಅಂಗನವಾಡಿ ನೌಕರರಿಂದ ಪ್ರತಿಭಟನೆ ಕನ್ನಡಿಗರ ಸಮಸ್ಯೆ ಪರಿಹರಿಸಲು ಸರಕಾರಕ್ಕೆ ಒತ್ತಡ : ಎಜಿಸಿ ಬಶೀರ್

ಕಾಸರಗೋಡು: ಭಾಷಾ ಅಲ್ಪಸಂಖ್ಯಾತ ಕನ್ನಡಿಗರಿಗೆ ಸಂವಿಧಾನಬದ್ಧವಾಗಿ ಹಲವು ಸವಲತ್ತು ಹಾಗು ಹಕ್ಕುಗಳನ್ನು ನೀಡಿದ್ದರೂ ಅವುಗಳು ಲಭಿಸುತ್ತಿಲ್ಲ. ಅಂಗನವಾಡಿ ಮಟ್ಟದಿಂದಲೇ ಕನ್ನಡ ಕಂದಮ್ಮಗಳ ಹಿತಕ್ಕೆ ಧಕ್ಕೆಯಾಗದಂತೆ ಎಲ್ಲಾ ಮಾಹಿತಿಗಳನ್ನು ಕನ್ನಡದಲ್ಲೇ ನೀಡುವಂತಾಗಬೇಕು. ಈ ನಿಟ್ಟಿನಲ್ಲಿ ಅಂಗನವಾಡಿ ವರ್ಕಸರ್್ ಮತ್ತು ಹೆಲ್ಪಸರ್್ ಅಸೋಸಿಯೇಶನ್ ನಡೆಸುತ್ತಿರುವ ಧರಣಿ ಸತ್ಯಾಗ್ರಹ ನ್ಯಾಯೋಚಿತವಾಗಿದೆ. ಕನ್ನಡಿಗ ಅಂಗನವಾಡಿ ಅಧ್ಯಾಪಿಕೆಯರು ಮತ್ತು ಸಹಾಯಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಜಿಲ್ಲಾ ಪಂಚಾಯತ್ನಲ್ಲಿ ಠರಾವು ಮಂಡನೆ ಮೂಲಕ ಸರಕಾರದ ಗಮನ ಸೆಳೆಯಲಾಗುವುದು. ಅಂಗನವಾಡಿ ಅಧ್ಯಾಪಿಕೆ ಕೈಪಿಡಿ, ಅಜರ್ಿ ನಮೂನೆ, ರಿಜಿಸ್ಟರ್ಗಳ ಸಹಿತ ಎಲ್ಲಾ ಮಾಹಿತಿಗಳನ್ನು ಕನ್ನಡದಲ್ಲಿ ನೀಡುವಂತೆ ಸರಕಾರವನ್ನು ಒತ್ತಾಯಿಸಲಾಗುವುದು. ಕನ್ನಡಿಗರ ನ್ಯಾಯೋಚಿತವಾದ ಹೋರಾಟಕ್ಕೆ ಸಂಪೂರ್ಣ ಬೆಂಬಲವಿದೆ ಮತ್ತು ಹೋರಾಟದಲ್ಲಿ ನಿಮ್ಮೊಂದಿಗಿದ್ದೇವೆ ಎಂದು ಕಾಸರಗೋಡು ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್ ಅವರು ಹೇಳಿದರು. ಕಾಸರಗೋಡು-ಮಂಜೇಶ್ವರ ಪ್ರದೇಶಗಳಲ್ಲಿ ಕನ್ನಡ ಬಲ್ಲ ಮೇಲ್ವಿಚಾರಕಿಯರನ್ನು ನೇಮಕ ಮಾಡಬೇಕು ಹಾಗು ಅಂಗನವಾಡಿ ಅಧ್ಯಾಪಿಕೆ ಕೈಪಿಡಿಯನ್ನು ಕನ್ನಡದಲ್ಲಿ ವಿತರಿಸಬೇಕು, ಅಜರ್ಿ ಫಾರಂ ಇತ್ಯಾದಿಗಳನ್ನು ಕನ್ನಡದಲ್ಲಿ ವಿತರಿಸಬೇಕು ಹಾಗು ಅಮ್ಮಂದಿರು ತಿಳಿದಿರಬೇಕಾದ ವಿಷಯಗಳ ಬಗೆಗಿನ ಕಾರ್ಡನ್ನು ಕನ್ನಡದಲ್ಲಿಯೂ ವಿತರಿಸಬೇಕೆಂದು ಒತ್ತಾಯಿಸಿ ಅಂಗನವಾಡಿ ಕನ್ನಡ ಅಧ್ಯಾಪಿಕೆಯರ ಹಾಗು ಸಹಾಯಕಿಯರ ಅಸೋಸಿಯೇಶನಿನ ವತಿಯಿಂದ ಬುಧವಾರ ಬೆಳಿಗ್ಗೆ ವಿದ್ಯಾನಗರ ಜಿಲ್ಲಾಧಿಕಾರಿ ಕಚೇರಿ ಪರಿಸರದಲ್ಲಿ ನಡೆದ ಧರಣಿ ಸತ್ಯಾಗ್ರಹವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕನ್ನಡ ಕೈಡಿಪಿಯನ್ನು ನೀಡಲು ಜಿಲ್ಲಾ ಪಂಚಾಯತ್ ಅಗತ್ಯದ ಕ್ರಮ ತೆಗೆದುಕೊಳ್ಳುವುದಾಗಿಯೂ ಭರವಸೆ ನೀಡಿದ ಅವರು ಈ ಹಿಂದೆ ಕನ್ನಡ ಪರ ಹೋರಾಟದಲ್ಲಿ ಭಾಗವಹಿಸಿದ ಬಗ್ಗೆ ನೆನಪಿಸಿದರು. ಧರಣಿ ಮುಷ್ಕರದಲ್ಲಿ ಅಸೋಸಿಯೇಶನ್ನ ಅಧ್ಯಕ್ಷೆ ಶೋಭಾ ಎಸ್.ಕುಂಬಳೆ ಅವರು ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಜಿಲ್ಲಾ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷ ಹಷರ್ಾದ್ ವಕರ್ಾಡಿ ಮಾತನಾಡಿ ಜಿಲ್ಲಾ ಪಂಚಾಯತ್ನಲ್ಲಿ ಠರಾವು ಮೂಲಕ ಅಂಗನವಾಡಿ ಅಧ್ಯಾಪಿಕೆಯರ, ಸಹಾಯಕಿಯರ ಬೇಡಿಕೆಗಳನ್ನು ಸರಕಾರದ ಮುಂದಿರಿಸುವುದಾಗಿಯೂ, ಸರಕಾರದ ಅನುಮತಿ ಲಭಿಸಿದ್ದಲ್ಲಿ ಕೈಪಿಡಿಯನ್ನು ಕನ್ನಡದಲ್ಲೇ ಮುದ್ರಿಸಿಕೊಡಲು ಜಿಲ್ಲಾ ಪಂಚಾಯತ್ ಕ್ರಮ ತೆಗೆದುಕೊಳ್ಳುವುದಾಗಿ ಅವರು ಹೇಳಿದರು. ಮಲಯಾಳಿ ಅಧಿಕಾರಿಗಳು ಕನ್ನಡ ಕಲಿಯಲಿ : ಅಚ್ಚಗನ್ನಡ ಪ್ರದೇಶವಾದ ಕಾಸರಗೋಡಿನ ವಿವಿಧ ಸರಕಾರಿ ಕಚೇರಿಗಳಲ್ಲಿ ಕನ್ನಡಿಗ ಅಧಿಕಾರಿಗಳನ್ನು ನೇಮಿಸಬೇಕು. ಮಲಯಾಳಿ ಅಧಿಕಾರಿಗಳು ಕನ್ನಡಿಗರಿಗೆ ಮಲಯಾಳ ಕಲಿಯಲು ಒತ್ತಾಯಿಸುವ ಬದಲಾಗಿ ಮಲಯಾಳ ಅಧಿಕಾರಿಗಳು ಕನ್ನಡ ಕಲಿತು ಸರಕಾರಿ ಸೌಲಭ್ಯಗಳಗಳನ್ನು ಕನ್ನಡಿಗರಿಗೆ ಕೊಡಲು ಮುಂದಾಗಲಿ ಎಂದು ಕುಂಬಳೆ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಎಲ್.ಪುಂಡರೀಕಾಕ್ಷ ಅವರು ಹೇಳಿದರು. ಕನ್ನಡಿಗರ ಸಂವಿಧಾನಬದ್ಧ ಸೌಲಭ್ಯ, ಹಕ್ಕುಗಳು, ಸವಲತ್ತುಗಳು ಸಿಗುವ ತನಕ ಹೋರಾಟ ನಡೆಸಬೇಕಾಗಿದೆ ಎಂದೂ, ಈ ಹೋರಾಟದಲ್ಲಿ ಮುಂಚೂಣಿಯಲ್ಲಿರುವುದಾಗಿ ಅವರು ಹೇಳಿದರು. ಧರಣಿಯನ್ನು ಉದ್ದೇಶಿಸಿ ಬ್ಲಾಕ್ ಪಂಚಾಯತ್ ಸದಸ್ಯ ಸತ್ಯಶಂಕರ ಭಟ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ವಿ.ಭಟ, ಕನ್ನಡ ಹೋರಾಟ ಸಮಿತಿ ಉಪಾಧ್ಯಕ್ಷ ಎಂ.ವಿ.ಮಹಾಲಿಂಗೇಶ್ವರ ಭಟ್, ಕೋಶಾಧಿಕಾರಿ ತಾರಾನಾಥ ಮಧೂರು, ವಿಶ್ವನಾಥ ರಾವ್, ಸತೀಶ್ ಮಾಸ್ಟರ್ ಕೂಡ್ಲು, ಟಿ.ಶಂಕರನಾರಾಯಣ ಭಟ್, ಡಾ|ಯು.ಮಹೇಶ್ವರಿ, ಸುಂದರ ಬಾರಡ್ಕ, ಪ್ರಸಾದ್, ಗುರುಪ್ರಸಾದ್ ಕೋಟೆಕಣಿ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು. ಕನ್ನಡ ಹೋರಾಟ ಸಮಿತಿಯ ಪ್ರಧಾನ ಕಾರ್ಯದಶರ್ಿ ಕೆ.ಭಾಸ್ಕರ ಪ್ರಾಸ್ತಾವಿಕ ಮಾತನಾಡಿ, ಕಾರ್ಯಕ್ರಮ ನಿರೂಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries