ಡಿ. 18ರಂದು ಇಕೋ ಶಾಪ್ ಮಾರಾಟ ವಿತರಣಾ ಕೇಂದ್ರದ ಉದ್ಘಾಟನೆ
0
ಡಿಸೆಂಬರ್ 16, 2018
ಪೆರ್ಲ:ಕೃಷಿ ಅಭಿವೃದ್ಧಿ ಕೃಷಿಕರ ಕ್ಷೇಮ ಇಲಾಖೆ ಮತ್ತು ಎಣ್ಮಕಜೆ ಗ್ರಾ.ಪಂ.ಸಂಯುಕ್ತ ಆಶ್ರಯದಲ್ಲಿ ಪಂಚಾಯಿತಿ ಸಮೀಪ ಜೈವ ತರಕಾರಿ, ಹಣ್ಣು ಹಂಪಲುಗಳ ವಿತರಿಸುವ ಇಕೋ ಶಾಪ್ ಮಾರಾಟ ಕೇಂದ್ರವನ್ನು ಡಿ.18ರಂದು ಬೆಳಗ್ಗೆ ಗ್ರಾ.ಪಂ.ಅಧ್ಯಕ್ಷೆ ಶಾರದಾ ವೈ.ಉದ್ಘಾಟಿಸಲಿದ್ದಾರೆ.
ಗ್ರಾ.ಪಂ.ಉಪಾಧ್ಯಕ್ಷ ಅಬೂಬಕ್ಕರ್ ಸಿದ್ದಿಕ್ ಖಂಡಿಗೆ ಅಧ್ಯಕ್ಷತೆ ವಹಿಸಲಿದ್ದು ಕಾಸರಗೋಡು ಪ್ರಿನ್ಸಿಪಾಲ್ ಕೃಷಿ ಅಧಿಕಾರಿ ನಂಬೀಶನ್ ವಿಜಯೇಶ್ವರಿ ಪದ್ಧತಿಯ ಮಾಹಿತಿ ನೀಡುವರು.ಪಂಚಾಯಿತಿ ಸ್ಥಾಯೀ ಸಮಿತಿ ಅಧ್ಯಕ್ಷರುಗಳಾದ ಜಯಶ್ರೀ ಕುಲಾಲ್, ಆಯಿಷಾ ಎ.ಎ., ಚಂದ್ರಾವತಿ ಎಂ, ಜಿ.ಪಂ.ಸದಸ್ಯೆ ಪುಷ್ಪ ಅಮೆಕ್ಕಳ, ಬ್ಲಾಕ್ ಪಂಚಾಯಿತಿ ಸದಸ್ಯೆಯರಾದ ಸವಿತಾ ಬಾಳಿಕೆ, ಸಫ್ರೀನಾ ಅಡ್ಕಸ್ಥಳ, ಪೆರ್ಲ ಕೃಷಿ ಅಧಿಕಾರಿ ವಿನೀತ್ ವಿ.ವರ್ಮ, ಇಕೋ ಶಾಪ್ ಅಧ್ಯಕ್ಷ ಅಬ್ದುಲ್ ರಹಿಮಾನ್ ಉಪಸ್ಥಿತರಿರುವರು.


