ಏತಡ್ಕ ಶಾಲಾ ಶತಮಾನೋತ್ಸವ ಕಾರ್ಯಕ್ರಮ ಡಿ.22 ಹಾಗೂ ಡಿ.23 ರಂದು
0
ಡಿಸೆಂಬರ್ 20, 2018
ಬದಿಯಡ್ಕ : 1918ರಲ್ಲಿ ಏತಡ್ಕ ಸಮೀಪದ ನೀರಡ್ಕದಲ್ಲಿ ಸ್ಥಾಪಿತವಾದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಏತಡ್ಕಕ್ಕೆ ಈಗ 100 ನೇ ವರ್ಷದ ಸಂಭ್ರಮ. ಕಾಸರಗೋಡಿನ ಪ್ರಾಚೀನ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಒಂದಾದ ಏತಡ್ಕ ಶಾಲೆ ಡಿಸೆಂಬರ್ 22 ಶನಿವಾರ ಹಾಗೂ ಡಿಸೆಂಬರ್ 23 ಭಾನುವಾರದಂದು ಶತಮಾನೋತ್ಸವ ಸಮಾರಂಭವನ್ನು ಹಮ್ಮಿಕೊಂಡಿದೆ.
ಡಿಸೆಂಬರ್ 22 ಶನಿವಾರ ಪೂರ್ವಾಹ್ನ 9.30ಕ್ಕೆ ಶತಮಾನೋತ್ಸವ ಸಲಹಾ ಸಮಿತಿಯ ಹಿರಿಯ ಸದಸ್ಯ ಗಣಪತಿ ಭಟ್ ಪತ್ತಡ್ಕ ರವರು ಧ್ವಜಾರೋಹಣ ನೆರವೇರಿಸಿ ಶತಮಾನೋತ್ಸವ ಸಮಾರಂಭಕ್ಕೆ ಚಾಲನೆ ನೀಡಲಿದ್ದಾರೆ. ಪೂರ್ವಾಹ್ನ 10 ಕ್ಕೆ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರಿನ ಕೊಡುಗೆಯಾಗಿ ನೀಡಿದ ನೂತನ ಶಾಲಾ ಕೊಠಡಿಗಳು, ವೈ. ಸುಬ್ರಹ್ಮಣ್ಯ ಭಟ್ ಮತ್ತು ಸಹೋದರರು ಕೊಡುಗೆಯಾಗಿ ನೀಡಿದ ವಿಚಿತ್ರ ಏತಡ್ಕ ಸ್ಮಾರಕ ಕುಡಿನೀರು ವ್ಯವಸ್ಥೆ, ಹಳೆವಿದ್ಯಾರ್ಥಿ ಸಂಘ ಕೊಡುಗೆಯಾಗಿ ನೀಡಿದ ಎಸ್ಸೆಂಬ್ಲಿ ಬಯಲಿನ ಮೇಲ್ಚಾವಣಿ, ಪಿ. ಸರೋಜ ಮತ್ತು ಎನ್. ಕೆ. ಸರೋಜ ರವರು ಕೊಡುಗೆಯಾಗಿ ನೀಡಿದ ನೂತನ ಕೊಠಡಿಯ ಪೀಠೋಪಕರಣಗಳ ಉದ್ಘಾಟನಾ ಸಮಾರಂಭ ಜರಗಲಿದ್ದು, ಶತಮಾನೋತ್ಸವ ಸಮಿತಿಯ ಗೌರವಾಧ್ಯಕ್ಷ ಡಾ. ವೈ. ಸುಬ್ರಾಯ ಭಟ್ ಉದ್ಘಾಟನೆ ನೆರವೇರಿಸಲಿದ್ದಾರೆ.
ಪೂರ್ವಾಹ್ನ 10.30 ರಿಂದ 12. 30 ಯ ತನಕ ಕುಂಬಳೆ ಉಪಜಿಲ್ಲಾ ಸಹಾಯಕ ಶಿಕ್ಷಣಾಧಿಕಾರಿ ಕೈಲಾಸ ಮೂರ್ತಿ ಅವರ ಅಧ್ಯಕ್ಷತೆಯಲ್ಲಿ, ವಿಶ್ರಾಂತ ಪ್ರಾಂಶುಪಾಲ ಡಾ. ಸುಬ್ರಹ್ಮಣ್ಯ ಭಟ್ ಕೆ ಅವರ ನಿರ್ದೇಶಕತ್ವದಲ್ಲಿ ಶೈಕ್ಷಣಿಕ ವಿಚಾರ ಗೋಷ್ಠಿ ನಡೆಯಲಿದ್ದು, ಕುಂಬ್ದಾಜೆ ಗ್ರಾಮ ಪಂಚಾಯತಿ ವಿದ್ಯಾಭ್ಯಾಸ ಸ್ಥಾಯಿ ಸಮಿತಿಯ ಅಧ್ಯಕ್ಷೆ ಯಶೋಧ ಉದ್ಘಾಟಿಸುವರು. ಶಿಕ್ಷಣದಲ್ಲಿ ರಕ್ಷಕರ ಜವಾಬ್ದಾರಿಗಳು ಎಂಬ ವಿಷಯದ ಕುರಿತು ಜಿ. ಜೆ. ಬಿ. ಎಸ್. ಪೆರಾಲ್ ನ ಮುಖ್ಯ ಶಿಕ್ಷಕ, ಕೇರಳ ರಾಜ್ಯ ಭಾರತ್ ಸ್ಕೌಟ್ಸ್- ಗೈಡ್ಸ್ ನ ಜಿಲ್ಲಾ ಆಯುಕ್ತ ಗುರು ಮೂರ್ತಿ ನಾಯ್ಕಾಪು, ಪರಿಸರ ನೈರ್ಮಲ್ಯ ಮತ್ತು ಆಹಾರ ಸ್ವಾವಲಂಬನೆ ಎಂಬ ವಿಷಯದ ಕುರಿತು ಎಸ್. ಎಸ್. ಎ. ಎಲ್. ಪಿ. ಎಸ್ ಉದಯಗಿರಿಯ ಅಧ್ಯಾಪಕ ರಾಜೇಶ್ ಉಬ್ರಂಗಳ, ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ಎಂಬ ವಿಷಯದ ಕುರಿತು ಸರಕಾರಿ ಪ್ರೌಢಶಾಲೆ ಕಲ್ಲಂಗಳ, ಕೇಪುವಿನ ಶಾಲಾ ಮುಖ್ಯ ಶಿಕ್ಷಕಿ ಮಾಲತಿ ಪ್ರಬಂದ ಮಂಡಿಸಲಿದ್ದು, ಬಳಿಕ ಸಂವಾದ ಕಾರ್ಯಕ್ರಮವು ಜರಗಲಿದೆ.
ಅಪರಾಹ್ನ 2 ಗಂಟೆಗೆ ಮಧುರೈ ಕಾಮರಾಜ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಹರಿಕೃಷ್ಣ ಭರಣ್ಯರವರ ಅಧ್ಯಕ್ಷತೆಯಲ್ಲಿ ಗುರುವಂದನೆ ಕಾರ್ಯಕ್ರಮ ಜರಗಳಿದ್ದು, ಶಾಲೆಯಲ್ಲಿ ಈ ಮೊದಲು ಸೇವೆ ಸಲ್ಲಿಸಿದ ಅಧ್ಯಾಪಕರಿಗೆ ಗೌರವಾರ್ಪಣೆ ಕಾರ್ಯಕ್ರಮ ನಡೆಯಲಿದೆ. ಶತಮಾನೋತ್ಸವದ ಅಂಗವಾಗಿ ಹಮ್ಮಿಕೊಂಡ ಸ್ಫರ್ಧೆಗಳಲ್ಲಿ ವಿಜೇತರಾದ ಶಾಲಾ ವಿದ್ಯಾರ್ಥಿಗಳಿಗೆ, ಹಳೆವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಜರಗಲಿದೆ.
ಅಪರಾಹ್ನ 5 ಕ್ಕೆ ಏತಡ್ಕ ಬಂಗಲೆ ಸಮೀಪದಿಂದ ಶಾಲೆಗೆ ಭವ್ಯ ಮೆರವಣಿಗೆ ನಡೆಯಲಿದೆ. ಅಪರಾಹ್ನ 6 ಗಂಟೆಗೆ ಮೂಡಬಿದಿರೆ ಆಳ್ವಾಸ್ ಫೌಂಡೇಶನ್ ನ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ ಅವರ ಅಧ್ಯಕ್ಷತೆಯಲ್ಲಿ ಶತಮಾನೋತ್ಸವ ಸಮಾರಂಭದ ಉದ್ಘಾಟನಾ ಕಾರ್ಯಕ್ರಮ ಜರಗಲಿದ್ದು, ಕಾಸರಗೋಡು ಶಾಸಕ ಎನ್. ಎ. ನೆಲ್ಲಿಕುನ್ನು ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ಕೇರಳ ಸರಕಾರದ ಆಡಳಿತ ಸುಧಾರಣಾ ಇಲಾಖೆ ಮತ್ತು ಸ್ಥಳೀಯಾಡಳಿತ ಸಂಸ್ಥೆಗಳ ವಿಶೇಷ ಕಾರ್ಯದರ್ಶಿ ಗೋಪಾಲಕೃಷ್ಣ ಭಟ್, ಐಎಎಸ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಕವಿ,ಸಾಹಿತಿ ಡಾ. ಕೆ ರಮಾನಂದ ಬನಾರಿ ಮಂಜೇಶ್ವರ ಸ್ಮರಣ ಸಂಚಿಕೆ ಬಿಡುಗಡೆಗೊಳಿಸುವರು. ಕುಂಬ್ದಾಜೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಆನಂದ ಮವ್ವಾರ್, ಸ್ಥಳೀಯ ವಾರ್ಡ್ ಪ್ರತಿನಿಧಿ ಶೈಲಜಾ ನಡುಮನೆ, ಕುಂಬ್ದಾಜೆ ಗ್ರಾಮ ಪಂಚಾಯತಿನ ಸದಸ್ಯೆ ಎಲಿಜಬೆತ್ ಕ್ರಾಸ್ತ ಶುಭಾಶಂಸನೆಗೈಯ್ಯುವರು. ಶತಮಾನೋತ್ಸವ ಸಮಿತಿಯ ಉಪಾಧ್ಯಕ್ಷ ವೈ. ಕೆ. ಗಣಪತಿ ಭಟ್, ಶಾಲಾ ಪ್ರಬಂಧಕರು, ಶತಮಾನೋತ್ಸವ ಸಮಿತಿಯ ಅಧ್ಯಕ್ಷರೂ ಅದ ವೈ. ಶ್ರೀಧರ್ ಹಾಗೂ ಮುಖ್ಯೋಪಾಧ್ಯಾಯಿನಿ ಸರೋಜ. ಪಿ ಉಪಸ್ಥಿತರಿರುವರು.
ರಾತ್ರಿ 9.30 ರಿಂದ ಶಾಲಾ ವಿದ್ಯಾರ್ಥಿಗಳಿಂದ ಮನರಂಜನಾ ಕಾರ್ಯಕ್ರಮ ಜರಗಲಿದ್ದು, ರಾತ್ರಿ 1 ರ ಬಳಿಕ ಹಳೆವಿದ್ಯಾರ್ಥಿಗಳ ಮನರಂಜನಾ ಕಾರ್ಯಕ್ರಮ ಹಾಗೂ ರಾತ್ರಿ 2.30 ರಿಂದ ಹಳೆವಿದ್ಯಾರ್ಥಿಗಳು ಹಾಗೂ ಅತಿಥಿ ಕಲಾವಿದರ ಕೂಡುವಿಕಯಿಂದ ರವಿದಾಸ ಆಳ್ವ ರಚಿಸಿ ನಿರ್ದೇಶಿಸಿದ ತುಳು ಸಮಾಜಿಕ ನಾಟಕ " ನಿರೆಳ್ " ಪ್ರದರ್ಶನಗೊಳ್ಳಲಿದೆ.
ಡಿಸೆಂಬರ್ 23 ಭಾನುವಾರ ಪೂರ್ವಾಹ್ನ 10 ಕ್ಕೆ ಬಾಲರಾಜ ಬೆದ್ರಡಿ ಮತ್ತು ಬಳಗದವರಿಂದ ಹಾಗೂ ಜಯಕುಮಾರಿ ಓಡಂಗಲ್ಲು ಹಾಗೂ ಶಾಲಾ ವಿದ್ಯಾರ್ಥಿನಿಯರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಜರಗಲಿದೆ. ಅಪರಾಹ್ನ 12 ಕ್ಕೆ ಪ್ರಪಂಚದ ಅತ್ಯಂತ ಕಿರಿಯ ಇಂದ್ರಜಾಲ ಕಲಾವಿದೆ ಹಾಗೂ ಪ್ರಪಂಚದ ಅತಿ ಕಿರಿಯ ಕೈಚಳಕದ ಜಾದೂಗಾರ್ತಿ ಎಂದೇ ಖ್ಯಾತರಾದ ಮ್ಯಾಜಿಕ್ ಮಳಿ ಸಹೋದರಿಯಾರು ಮತ್ತು ತಂಡದವರಿಂದ " ಅಭೂತಪೂರ್ವ ಜಾದೂ " ಇಂದ್ರಜಾಲ ಪ್ರದರ್ಶನ ನಡೆಯಲಿದೆ. ಅಪರಾಹ್ನ 2 ಕ್ಕೆ ಹಳೆವಿದ್ಯಾರ್ಥಿಗಳು ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.
ಅಪರಾಹ್ನ 5 ಕ್ಕೆ ಏತಡ್ಕ ಬಂಗಲೆ ಸಮೀಪದಿಂದ ಶಾಲೆಗೆ ಭವ್ಯ ಮೆರವಣಿಗೆ ನಡೆಯಲಿದೆ. ಸಾಯಂಕಾಲ 6 ಕ್ಕೆ ಕಾಸರಗೋಡು ಸಂಸದ ಪಿ ಕರುಣಾಕರನ್ ರವರ ಅಧ್ಯಕ್ಷತೆಯಲ್ಲಿ ಸಮಾರೋಪ ಕಾರ್ಯಕ್ರಮ ಜರಗಲಿದ್ದು, ಕೇರಳ ಸರಕಾರದ ಕಂದಾಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಇ. ಚಂದ್ರಶೇಖರನ್ ರವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎ ಶ್ರೀನಿವಾಸ್ ಐಪಿಎಸ್, ಕಾಸರಗೋಡು ಡಿವೈಎಸ್ಪಿ ಎಂ. ವಿ. ಸುಕುಮಾರನ್, ಕಾಸರಗೋಡು ಜಿಲ್ಲಾ ಪಂಚಾಯತಿ ಸದಸ್ಯ ನ್ಯಾಯವಾದಿ ಕೆ. ಶ್ರೀಕಾಂತ್, ಕಾಸರಗೋಡು ಜಿಲ್ಲಾ ವಿದ್ಯಾಧಿಕಾರಿ ನಂದಿಕೇಶ್ ಎನ್, ಕುಂಬಳೆ ಉಪಜಿಲ್ಲಾ ಸಹಾಯಕ ವಿದ್ಯಾಧಿಕಾರಿ ಕೈಲಾಸ ಮೂರ್ತಿ ಕೆ, ಕುಂಬಳೆ ಉಪಜಿಲ್ಲಾ ಬ್ಲಾಕ್ ಕಾರ್ಯಕ್ರಮಾಧಿಕಾರಿ ಕುಂಞõÉಕೃಷ್ಣನ್ ಕೆ, ಕುಂಬ್ದಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಾತಿಮ್ಮತ್ ಝುಹರಾ ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಈ ವರ್ಷ ಸೇವೆಯಿಂದ ನಿವೃತ್ತರಾಗಲಿರುವ ಮುಖ್ಯೋಪಾಧ್ಯಾಯಿನಿ ಸರೋಜ ಪಿ ಹಾಗೂ ಅಧ್ಯಾಪಕಿ ಸರೋಜ ಎನ್ ಕೆ ಅವರಿಗೆ ಸನ್ಮಾನ ಕಾರ್ಯಕ್ರಮ ಜರಗಲಿದೆ. ಎಸ್. ಎ. ಪಿ. ಎಚ್. ಎಸ್. ಎಸ್ ಅಗಲ್ಪಾಡಿಯ ಪ್ರಾಂಶುಪಾಲರಾದ ಸತೀಶ ವೈ ಹಾಗೂ ಹಳೆವಿದ್ಯಾರ್ಥಿ ಶ್ರದ್ಧಾ ಕೆ ಯವರು ಅಭಿನಂದನಾ ಭಾಷಣ ಮಾಡಲಿದ್ದು, ಹಂಪಿ ವಿಶ್ವವಿದ್ಯಾಲಯ ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಳಪತಿ ಡಾ. ಬಿ. ಎ. ವಿವೇಕ ರೈ ಸಮಾರೋಪ ಭಾಷಣ ಮಾಡುವರು. ಶತಮಾನೋತ್ಸವ ಸಮಿತಿಯ ಖಜಾಂಜಿ ಸುಬ್ರಹ್ಮಣ್ಯ ವೈ, ಶತಮಾನೋತ್ಸವ ಸಮಿತಿಯ ಗೌರವಾಧ್ಯಕ್ಷ ಡಾ. ವೈ. ಸುಬ್ರಾಯ ಭಟ್ ಉಪಸ್ಥಿತರಿರುವರು.
ಬಳಿಕ ರಾತ್ರಿ 9.30 ರಿಂದ ಶಾಲಾ ಮಕ್ಕಳಿಂದ ಮನರಂಜನಾ ಕಾರ್ಯಕ್ರಮ ಹಾಗೂ ರಾತ್ರಿ 1 ರಿಂದ ಹಳೆವಿದ್ಯಾರ್ಥಿಗಳಿಂದ ಮನರಂಜನಾ ಕಾರ್ಯಕ್ರಮ ಜರಗಲಿದೆ. ರಾತ್ರಿ 2.30 ಕ್ಕೆ ಹಳೆವಿದ್ಯಾರ್ಥಿಗಳು ಹಾಗೂ ಅತಿಥಿ ಕಲಾವಿದರ ಕುಡುವಿಕೆಯಿಂದ ಗುರು ಸುಬ್ಬಣ್ಣಕೋಡಿ ರಾಮ ಭಟ್ ನಿರ್ದೇಶನದ " ರಾಜಾ ದಿಲೀಪಾ " ಯಕ್ಷಗಾನ ಪ್ರಸಂಗ ಪ್ರದರ್ಶನಗೊಳ್ಳಲಿದೆ.

