ಪೆರ್ಲದಲ್ಲಿ ಡಿ.29 ರಂದು ನೃತ್ಯಾಂಜಲಿ ಕಾರ್ಯಕ್ರಮ
0
ಡಿಸೆಂಬರ್ 20, 2018
ಪೆರ್ಲ: ಪೆರ್ಲದ ನೃತ್ಯಾಂಜಲಿ ಕಲಾಕೇಂದ್ರದ 7ನೇ ವಾರ್ಷಿಕೋತ್ಸವ ಡಿ.29 ರಂದು ಭಾನುವಾರ ವಿವಿಧ ಕಾರ್ಯಕ್ರಮಗಳೊಂದಿಗೆ ಪೆರ್ಲಸತ್ಯನಾರಾಯಣ ಶಾಲಾ ವಠಾರದಲ್ಲಿ ನಡೆಯಲಿದೆ.
ಸಂಜೆ 5.30ಕ್ಕೆ ಕುಂಬಳೆ ಉಪಜಿಲ್ಲಾ ವಿಧ್ಯಾಧಿಕಾರಿ ಕೆ.ಕೈಲಾಸಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಹಿರಿಯ ಭರತನಾಟ್ಯ ಕಲಾವಿದೆ ವಿದುಷಿಃ ಶಶಿಕಲಾ ಟೀಚರ್ ಉದ್ಘಾಟಿಸುವರು. ಹಿರಿಯ ರಂಗ ಕಲಾವಿದ, ಚಲನಚಿತ್ರ ನಟ, ನಿರ್ದೇಶಕ ಕಾಸರಗೋಡು ಚಿನ್ನಾ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಪೆರ್ಲ ಸತ್ಯನಾರಾಯಣ ಫ್ರೌಢಶಾಲಾ ಮುಖ್ಯೋಪಾಧ್ಯಾಯ ರಾಜೇಂದ್ರ ಬಿ. ಶುಭಹಾರೈಸುವರು. ಸಭಾ ಕಾರ್ಯಕ್ರಮದ ಬಳಿಕ 6.30 ರಿಂದ ಭರತನಾಟ್ಯ, ಜಾನಪದ ನೃತ್ಯ ಹಾಗೂ ನೃತ್ಯ ರೂಪಕ ಶ್ರೀಕೃಷ್ಣ ಪಾರಿಜಾತ ಪ್ರದರ್ಶನ ನಡೆಯಲಿದೆ.


