ಡಿ.26.ರಂದು 40ನೇ ವರ್ಷದ ಮೀಯಪದವು ಅಯ್ಯಪ್ಪ ದೀಪೋತ್ಸವ
0
ಡಿಸೆಂಬರ್ 20, 2018
ಮಂಜೇಶ್ವರ: ಮೀಯಪದವು ಶ್ರೀಅಯ್ಯಪ್ಪ ಸೇವಾಸಂಘದ ಆಶ್ರಯದಲ್ಲಿ 40ನೇ ವರ್ಷದ ಅಯ್ಯಪ್ಪ ದೀಪೋತ್ಸವ ಡಿ. 26 ರಂದು ಬುಧವಾರ ವಿವಿಧ ವೈದಿಕ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಬೆಳಿಗ್ಗೆ 5.30ಕ್ಕೆ ಗಣಹೋಮ, ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಭಜನಾ ಸೇವೆ, 12.00ಕ್ಕೆ ಮಹಾಪೂಜೆ ಅನ್ನಸಂತರ್ಪಣೆ, ರಾತ್ರಿ 8ರಿಂದ ಮೀಯಪದವು ಶ್ರೀಮಹಾಲಿಂಗೇಶ್ವರ ದೇವಸ್ಥಾನದಿಂದ ಮೀಯಪದವು ಭಜನಾಮಂದಿರದವರೆಗೆ ದೇವರ ಮೆರವಣಿಗೆ, ರಾತ್ರಿ 11ಕ್ಕೆ ತಾಯಂಬಕ, ಪ್ರಾತಃಕಾಲ 4ಕ್ಕೆ ಪೂಜೆ ಅಗ್ನಿಪ್ರವೇಶ ಪ್ರಸಾದ ವಿತರಣೆ ಜರಗಲಿದೆ.
ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ 10.30ರಿಂದ ಮಾಸ್ಟರ್ಸ್ ಆಟ್ರ್ಸ್- ಸ್ಪೋಟ್ರ್ಸ್ ಕ್ಲಬ್ ಮೀಯಪದವು ಇವರ ಪ್ರಾಯೋಜಕತ್ವದಲ್ಲಿ ಸ್ಥಳೀಯ ಮಕ್ಕಳಿಂದ ನೃತ್ಯ ವೈವಿದ್ಯ 12ರಿಂದ ಶಾರದಾ ಕಲಾ ಆಟ್ರ್ಸ್ ಕಲಾವಿದೆರ್ ಮಂಜೇಶ್ವರ ತಂಡದಿಂದ ಸಾಮಾಜಿಕ ತುಳು ನಾಟಕ " ಇತ್ತ್ ನಾತ್ ದಿನ ಬಂಜಿಗ್ ಹಾಕೊಡ್ಚಿ" ಜರಗಲಿದೆ ಎಂದು ಕ್ಷೇತ್ರ ಪ್ರಕಟಣೆ ತಿಳಿಸಿದೆ.

