ಎನ್‍ಟಿಯು ಜಿಲ್ಲಾ ಸಮ್ಮೇಳನ ಇಂದಿನಿಂದ
0
ಡಿಸೆಂಬರ್ 20, 2018
ಮಂಜೇಶ್ವರ: ದೇಶೀಯ ಅಧ್ಯಾಪಕ ಪರಿಷತ್(ಎನ್.ಟಿ.ಯು) ಕೇರಳ, ಕಾಸರಗೋಡು ಜಿಲ್ಲಾ ಸಮ್ಮೇಳನ ಇಂದು ಹಾಗೂ ನಾಳೆ ವಾಮಂಜೂರು ಶ್ರೀ ಗುರು ನರಸಿಂಹ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿದ್ದು, ಇಂದು(ಶುಕ್ರವಾರ) ಸಂಜೆ ನಡೆಯಲಿರುವ ಪ್ರತಿನಿಧಿ ಸಮ್ಮೇಳನದಲ್ಲಿ ಜಿಲ್ಲಾಧ್ಯಕ್ಷ ವಿಘ್ನೇಶ್ವರ ಕೆದುಕೋಡಿ ಅಧ್ಯಕ್ಷತೆ ವಹಿಸುವರು. ಪಿಂಚಣಿದಾರರ ಸಂಘದ ಪ್ರಾಂತ ಸಮಿತಿ ಸದಸ್ಯ ಭಾಸ್ಕರ.ಬಿ ಮುಖ್ಯ ಭಾಷಣ ಮಾಡುವರು. ನಾಳೆ( ಡಿ.22) ಬೆಳಿಗ್ಗೆ 9.30ಕ್ಕೆ ಧ್ವಜಾರೋಹಣ, 10.ಕ್ಕೆ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಸಂಘಟನೆಯ ಪ್ರಾಂತ್ಯ ಪ್ರಧಾನ ಕಾರ್ಯದರ್ಶಿ ಗೋಪಕುಮಾರ್ ಉದ್ಘಾಟಿಸುವರು. ಜಿಲ್ಲಾಧ್ಯಕ್ಷ ವಿಘ್ನೇಶ್ವರ ಕೆದುಕೋಡಿ ಅಧ್ಯಕ್ಷತೆ ವಹಿಸುವರು. ಬಿಎಂಎಸ್ ಜಿಲ್ಲಾ ಕಾರ್ಯದರ್ಶಿ ಕೆ.ಎ ಶ್ರೀನಿವಾಸನ್, ಎನ್‍ಟಿಯು ಪ್ರಾಂತ್ಯ ಸಮಿತಿ ಸದಸ್ಯ ವೆಂಕಪ್ಪ ಶೆಟ್ಟಿ ಹಾಗೂ ಬಾಲಕೃಷ್ಣ ವಿ.ವಿ., ಶುಭಾಶಂಸನೆಗೈಯ್ಯುವರು. ಎನ್.ಟಿ.ಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಭಾಕರನ್ ನಾಯರ್, ಜಿಲ್ಲಾ ಉಪಾಧ್ಯಕ್ಷ ರಾಧಾಕೃಷ್ಣ ನಾಯ್ಕ್ ಉಪಸ್ಥಿತರಿರುವರು. 11.ರಿಂದ ನಡೆಯುವ ವನಿತಾ ಸಮ್ಮೇಳನದಲ್ಲಿ ಜಿಲ್ಲಾ ಉಪಾಧ್ಯಕ್ಷೆ ಉಮಾ ಟೀಚರ್ ಪ್ರಾಸ್ತಾವಿಕವಾಗಿ ಮಾತನಾಡುವರು. ಎನ್.ಟಿ.ಯು ಪ್ರಾಂತ್ಯ ಕಾರ್ಯದರ್ಶಿ ರೇವತಿ.ಕೆ ಅಧ್ಯಕ್ಷತೆ ವಹಿಸುವರು. ನಿವೃತ್ತ ಶಿಕ್ಷಕಿ ಜಯಲಕ್ಷ್ಮೀ ಕಾರಂತ ಮುಖ್ಯ ಭಾಷಣ ಮಾಡುವರು. ಪ್ರಾಂತ್ಯ ಸಮಿತಿ ಅಧ್ಯಕ್ಷೆ ಪ್ರಸನ್ನ ಕುಮಾರಿ ಶುಭಾಶಂಸನೆಗೈಯಲಿರುವರು.ಅಪರಾಹ್ನ 2. ರಿಂದ ಸಂಘಟನಾ ಚರ್ಚೆಯಲ್ಲಿ ಪ್ರಾಂತ್ಯ ಕಾರ್ಯದರ್ಶಿ ಚಂದ್ರಹಾಸ.ಪಿ ಅಧ್ಯಕ್ಷತೆ ವಹಿಸುವರು. ಪ್ರಭಾಕರನ್ ನಾಯರ್ ವರದಿ ಮಂಡಿಸುವರು. ಜಿಲ್ಲಾ ಕೋಶಾಧಿಕಾರಿ ಮಹಾಬಲ ಭಟ್ ಲೆಕ್ಕಪತ್ರ ಮಂಡಿಸುವರು. ಸಂಜೆ 3. ರಿಂದ ಮೆರವಣಿಗೆ ಮತ್ತು ಸಾರ್ವಜನಿಕ ಸಭೆ ಹೊಸಂಗಡಿ ಜಂಕ್ಷನ್ ಬಳಿ ನಡೆಯಲಿದೆ. ವಿಘ್ನೇಶ್ವರ ಕೆದುಕೋಡಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ನ್ಯಾಯವಾದಿ ಕೆ.ಶ್ರೀಕಾಂತ್, ಮತ್ತು ಎನ್‍ಟಿಯು ಪ್ರಾಂತ್ಯ ಸಂಘಟನಾ ಕಾರ್ಯದರ್ಶಿ ಅಶೋಕ್ ಬಾಡೂರು ಉಪಸ್ಥಿತರಿರುವರು. ಜಿಲ್ಲಾ ಕಾರ್ಯದರ್ಶಿ ಈಶ್ವರ ಕಿದೂರು ಉಪಸ್ಥಿತರಿರುವರು.

