ಶೇಷವನ : ಜನಮನ ರಂಜಿಸಿದ ನೃತ್ಯ ಸಂಗಮ
0
ಡಿಸೆಂಬರ್ 17, 2018
ಕಾಸರಗೋಡು: ಬಾದಾರ ಶೇಷವನ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದಲ್ಲಿ ಜರಗಿದ ಚಂಪಾ ಷಷ್ಠಿ ಉತ್ಸವದಂಗವಾಗಿ ಪಂಚಮಿ ಉತ್ಸವದಂದು ಸಂಜೆ ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಮಹಿಳಾ ಸಂಗದ ಸಹಯೋಗದಲ್ಲಿ ಜರಗಿದ ಸ್ಥಳೀಯ ಮಕ್ಕಳ ನೃತ್ಯ ಸಂಗಮ ಜನಮನಸೂರೆಗೊಂಡಿತು.
ಸುಮಾರು ಅರುವತ್ತು ಉದಯೋನ್ಮಕ ಕಲಾವಿದರು ಇಪ್ಪತ್ತನಾಲ್ಕು ನೃತ್ಯಗಳನ್ನು ಪ್ರದರ್ಶಿಸಿದರು. ಭರತನಾಟ್ಯ, ಜಾನಪದ ನೃತ್ಯ, ಸಮೂಹ ನೃತ್ಯ ನೋಡುಗರನ್ನು ಮುದಗೊಳಿಸಿತು. ಎಲ್ಲಾ ಕಲಾವಿದರಿಗೆ ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಯುವಕ ಸಂಗದ ವತಿಯಿಂದ ಸ್ಮರಣಿಕೆಗಳನ್ನು ನೀಡಲಾಯಿತು. ಅನುವಂಶಿಕ ಮೊಕ್ತೇಸರ ಸದಾಶಿವ, ಆಡಳಿತ ಮೊಕ್ತೇಸರ ವೇಣುಗೋಪಾಲ ಕೂಡ್ಲು, ಕಾರ್ಯದರ್ಶಿ ಸುರೇಶ್ ಮಣಿಯಾಣಿ, ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಯುವಕ ಸಂಘದ ಅಧ್ಯಕ್ಷ ಮಹೇಶ ಕನ್ನಿಗುಡ್ಡೆ, ಕಾರ್ಯದರ್ಶಿ ರೋಹಿತ್, ಕೋಶಾಧಿಕಾರಿ ಗೋಪಾಲ ಪಾಯಿಚ್ಚಾಲು, ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಮಹಿಳಾ ಸಂಘದ ಅಧ್ಯಕ್ಷೆ ದೀಪಾ ನಾಂಗುರಿ, ಕೋಶಾಧಿಕಾರಿ ಜಯಲಕ್ಷ್ಮಿ ಅಡಪ ಉಪಸ್ಥಿತರಿದ್ದರು. ಶೇಷವನ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ ಟ್ರಸ್ಟಿ ವಸಂತ ಕಾರ್ಯಕ್ರಮದ ನೇತೃತ್ವ ವಹಿಸಿದರು. ಕಿರಣ್ ಪ್ರಸಾದ್ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು.

