ಕಿಸಾನ್ ಗೋಷ್ಠಿ ಮತ್ತು ಕಿಸಾನ್ ಸಂಗಮ
0
ಡಿಸೆಂಬರ್ 19, 2018
ಉಪ್ಪಳ: ಪೈವಳಿಕೆ ಗ್ರಾಮಪಂಚಾಯತಿ ಕೃಷಿಭವನ ಮತ್ತು ಆತ್ಮಾ ಸಂಘಟನೆಗಳ ಜಂಟಿ ಆಶ್ರಯದಲ್ಲಿ "ಕಿಸಾನ್ ಗೋಷ್ಠಿ ಮತ್ತು ಕಿಸಾನ್ ಸಂಗಮ" ಕಾರ್ಯಕ್ರಮ ಮಂಗಳವಾರ ಜರುಗಿತು.
ಗ್ರಾಮ ಪಂಚಾಯತಿ ಅಧ್ಯಕ್ಷೆ ಭಾರತೀ ಜೆ.ಶೆಟ್ಟಿ ಉದ್ಘಾಟಿಸಿದರು. ಉಪಾಧ್ಯಕ್ಷೆ ಸುನಿತಾ ವಾಲ್ಟಿ ಡಿಸೋಜಾ ಅಧ್ಯಕ್ಷತೆ ವಹಿಸಿದ್ದರು. ಅತ್ಯುತ್ತಮ ಕೃಷಿಕರಾದ ವಿಷ್ಣು ಭಟ್, ಮಹಾಬಲ ಪೂಜಾರಿ, ಐತ ಕಯ್ಯಾರು, ಇದ್ದಿನ್ ಕುಂಞÂ, ವೆಂಕಪ್ಪ ಗೌಡ,ಚಂದ್ರಾವತಿ, ಮಾಸ್ಟರ್ ಶುಭರಾಜ್ ಮತ್ತು ದಾಮೋದರ ಶೆಟ್ಟಿ ಅವರನ್ನು ಅಭಿನಂದಿಸಲಾಯಿತು.
ಕಾಸರಗೋಡು ಸಿ.ಪಿ.ಸಿ.ಆರ್.ಐ.ಯ ಡಾ.ರಾಜ್ ಕುಮಾರ್, ಸುರೇಖಾ ಕೃಷಿಕರೊಂದಿಗೆ ವಿವಿಧ ವಿಚಾರಗಳಲ್ಲಿ ಸಂವಾದ ನಡೆಸಿದರು. ಕೃಷಿ ಅಭಿಯಂತರ ಅಂಜನಾ ಸ್ವಾಗತಿಸಿ, ಆತ್ಮಾದ ಬಿ.ಟಿ.ಎಂ.ರಿಜಿನ್ ವಂದಿಸಿದರು.


