ಇಂದು ಸಂದರ್ಶನ
0
ಡಿಸೆಂಬರ್ 19, 2018
ಮುಳ್ಳೇರಿಯ: ಕುತ್ತಿಕೋಲ್ ಗ್ರಾಮ ಪಂಚಾಯತಿಯಲ್ಲಿ ನೂತನವಾಗಿ ಆರಂಭಿಸಲಾದ ಸರಕಾರಿ ಐ.ಟಿ.ಐ.ಯಲ್ಲಿ ಡ್ರಾಫ್ಟ್ ಮಾನ್ ಸಿವಿಲ್ ಟ್ರೇಡ್, ಇಲೆಕ್ಟ್ರಾನಿಕ್ಸ್ ಮೆಕಾನಿಕ್ ಟ್ರೇಡ್ನಲ್ಲಿ ಬರಿದಾಗಿರುವ ಅತಿಥಿ ಇನ್ಸ್ ಸ್ಟ್ರಕ್ಟರ್ ಗಳ ಹುದ್ದೆಗೆ ನೇಮಕಕ್ಕಾಗಿ ಇಂದು (ಡಿ.19)ಸಂದರ್ಶನ ನಡೆಯಲಿದೆ.
ಸಿವಿಲ್ ಇನ್ಸ್ ಸ್ಟ್ರಕ್ಟರ್ ರ ಸಂದರ್ಶನ ಬೆಳಿಗ್ಗೆ 11 ಗಂಟೆಗೆ , ಮಧ್ಯಾಹ್ನ 2 ಗಂಟೆಗೆ ಕುತ್ತಿಕೋಲ್ ನಲ್ಲಿ ಚಟುವಟಿಕೆ ನಡೆಸುತ್ತಿರುವ ಐ.ಟಿ.ಐ.(ನೆರುದ ಗ್ರಂಥಾಲಯ)ಯಲ್ಲಿ ಇಲೆಕ್ಟ್ರೋನಿಕ್ಸ್ ಇನ್ಸ್ ಸ್ಟ್ರಕ್ಟರ್ ರ ಸಂದರ್ಶನ ನಡೆಯಲಿದೆ. ಸಿವಿಲ್ ಇನ್ಸ್ ಸ್ಟ್ರಕ್ಟರ್ ಹುದ್ದೆಗೆ ಸಿವಿಲ್ ಇಂಜಿನಿಯರ್ ಪದವಿ/ಮೂರು ವರ್ಷಗಳ ಡಿಪ್ಲೊಮಾ ಅಥವಾ ಡ್ರಾಫ್ಟ್ ಮೆನ್ ಸಿವಿಲ್ ಟ್ರೇಡ್ ನಲ್ಲಿ ಎನ್.ಟಿ.ಸಿ. ಮತ್ತು ಮೂರು ವರ್ಷಗಳ ವೃತ್ತಿ ಪರಿಚಯ ಇರುವವರು ಅರ್ಹರು. ಇಲೆಕ್ಟ್ರಾನಿಕ್ಸ್ ಇನ್ಸ್ ಸ್ಟ್ರಕ್ಟರ್ ಹುದ್ದೆಗೆ ಇಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಪದವಿ/ಮೂರು ವರ್ಷದ ಡಿಪ್ಲೊಮಾ ಅಥವಾ ಇಲಕಟ್ರೋನಿಕ್ಸ್ ಮೆಕಾನಿಕ್ ಟ್ರೇಡ್ ನಲ್ಲಿ ಎನ್.ಟಿ.ಸಿ., ಮೂರು ವರ್ಷದ ವೃತ್ತಿ ಪರಿಚಯ ಹೊಂದಿರುವವರು ಅರ್ಹರು. ಮಾಹಿತಿಗೆ ದೂರವಾಣಿ ಸಂಖ್ಯೆ : 9288080311.ಗೆ ಸಂಪರ್ಕಿಸಬಹುದಾಗಿದೆ.

