ತೋಡು ಶುಚೀಕರಣ
0
ಡಿಸೆಂಬರ್ 19, 2018
ಮಂಜೇಶ್ವರ: ಹರಿತ ಕೇರಳಂ ಮಿಷನ್ ದ್ವಿತೀಯ ವಾರ್ಷಿಕೋತ್ಸವ ಅಂಗವಾಗಿ ಕುಳೂರು ಕರಿಪಾರೆ ಕಳಾಯಿಕಟ್ಟೆ ತೋಡಿನ ಶುಚೀಕರಣ ನಡೆಯಿತು.
ಮೀಂಜ ಗ್ರಾಮಪಂಚಾಯತಿ ಅಧ್ಯಕ್ಷ ಶಂಶಾದ್ ಶುಕೂರ್ ಉದ್ಘಾಟಿಸಿದರು. ಕಾರ್ಯದರ್ಶಿ ಸದಸ್ಯರು, ಉದ್ಯೋಗ ಖಾತರಿ ಯೋಜನೆ ಕಾರ್ಮಿಕರು, ಸಾರ್ವಜನಿಕರು ಮೊದಲಾದವರು ಭಾಗವಹಿಸಿದರು. ಜನಪರ ಒಕ್ಕೂಟದೊಂದಿಗೆ ಮುಂದೆಯೂ ಶುಚೀಕರಣ ಕಾಯಕ ನಡೆಸುವುದಾಗಿ ಸ್ಥಳೀಯರು ತಿಳಿಸಿದರು.

