ಹರಿತ ಕೇರಳಂ ಮಿಷನ್ ಯೋಜನೆ: ನಾಡಹಬ್ಬವಾಗಿ ಆಚರಿಸಿದ ಎಡನೀರಿನ ಜನ
0
ಡಿಸೆಂಬರ್ 19, 2018
ಬದಿಯಡ್ಕ: ನಾಡಹಬ್ಬವಾಗಿ ಹರಿತಕೇರಳಂ ಮಿಷನ್ ನ ಚಟುವಟಿಕೆಗಳನ್ನು ಚೆಂಗಳ ಗ್ರಾಮ ಪಂಚಾಯತಿ ಆಚರಿಸಿದೆ. ಇದರ ಅಂಗವಾಗಿ ಎಡನೀರು ಮಧುವಾಹಿನಿ ನದಿಯ ಪಾಶ್ರ್ವಭಿತ್ತಿ ನಿರ್ಮಾಣ ಇತ್ತೀಚೆಗೆ ನಡೆಯಿತು.
ಹರಿತ ಕೇರಳಂ ಮಿಷನ್ ದ್ವಿತೀಯ ವಾರ್ಷಿಕೋತ್ಸವ ಅಂಗವಾಗಿ ಶುಚಿತ್ವ ಸಹಿತ ಅನೇಕ ಕಾಮಗಾರಿಗಳು ಸಾರ್ವಜನಿಕ ಸಹಭಾಗಿತ್ವದೊಂದಿಗೆ ನಡೆಯುತ್ತಿವೆ. ಜಿಲ್ಲೆಯಾದ್ಯಂತ ಜರುಗುತ್ತಿರುವ ಈ ಕಾಮಗಾರಿಗಳ ಜನ ಸಹಭಾಗಿತ್ವ ಮತ್ತು ಯಶಸ್ಸು ವಿವಿಧೆಡೆ ಕಾಮಗಾರಿಗಳಿಗೆ ಪ್ರೇರಣೆಯಾಗುತ್ತಿದೆ.
ಎಡನೀರು ಮಧುವಾಹಿನಿ ನದಿಯಲ್ಲಿ ಪಾಶ್ರ್ವಭಿತ್ತಿ ನಿರ್ಮಾಣವೂ ಇದೇ ನಿಟ್ಟಿನಲ್ಲಿ ನಡೆಯಿತು. ಈ ಮೂಲಕ ನದಿಯ ನೀರು ಪೋಲಾಗದೆ ಎಡನೀರು ಪರಿಸರದ ಕುಡಿಯುವ ನೀರಿನ ಬರ ಪರಿಹಾರಕ್ಕೆ , ಪ್ರಕೃತಿಯಲ್ಲಿ ಹಸುರು ಶಾಶ್ವತಗೊಳಿಸುವಲ್ಲಿ ಮತ್ತು ಹೆಕ್ಟೇರ್ ಗಟ್ಟಲೆ ಗದ್ದೆ-ತೋಟಗಳಿಗೆ ನೀರು ಪೂರೈಕೆ ಪೂರಕವಾಗಿದೆ.
ಸುಮಾರು 500 ಮಂದಿ ಜನ ಕಾಮಗಾರಿಗೆ ಕೈಸೇರಿಸಿದರು. ಇವರಲ್ಲಿ 300 ಮಂದಿ ಉದ್ಯೋಗ ಖಾತರಿ ಯೋಜನೆಯ ಕಾರ್ಮಿಕರು, ಉಳಿದಂತೆ ವಿವಿಧ ಕ್ಲಬ್ ಗಳ ಸದಸ್ಯರು, ಯುವಜನ ಸಂಘಟನೆಗಳ ಪ್ರತಿನಿಧಿಗಳು, ಎನ್.ಎಸ್.ಎಸ್. ಸ್ವಯಂಸೇವಕರು ಮೊದಲಾದವರು ಭಾಗವಹಿಸಿದರು.
ಪಂಚಾಯತಿಯ ಉಳಿದ ಜಲಾಶಯಗಳಲ್ಲೂ ತಡೆಗೋಡೆ ನಿರ್ಮಿಸುವ ಯೋಜನೆಯಿದ್ದು, ಶೀಘ್ರದಲ್ಲೇ ಈ ರೀತಿಯ ಕಾಮಗಾರಿ ನಡೆಯಲಿದೆ ಎಂದು ಸಂಬಂಧಪಟ್ಟವರು ತಿಳಿಸಿದರು.
ಜಿಲ್ಲಾಧಿಕಾರಿ ಡಾ.ಸಜಿತ್ ಬಾಬು ಕಾಮಗಾರಿಗೆ ಚಾಲನೆ ನೀಡಿದರು. ಚೆಂಗಳ ಗ್ರಾಮ ಪಂಚಾಯತಿ ಅಧ್ಯಕ್ಷೆ ಶಾಹಿನಾ ಸಲೀಂ ಅಧ್ಯಕ್ಷತೆ ವಹಿಸಿದ್ದರು. ಹಲಗೆಯಿರಿಸುವ ಕಾಮಗಾರಿಗೆ ಜಿಲ್ಲಾಧಿಕಾರಿ ಮತ್ತು ಗ್ರಾಮಪಂಚಾಯತಿ ಅಧ್ಯಕ್ಷೆ ಹೆಗಲು ನೀಡಿದರು.
ಹರಿತ ಕೇರಳಂ ಮಿಷನ್ ಜಿಲ್ಲಾ ಸಂಚಾಲಕ ಎಂ.ಪಿ.ಸುಬ್ರಹ್ಮಣ್ಯನ್, ಶುಚಿತ್ವ ಮಿಷನ್ ಜಿಲ್ಲಾ ಸಂಚಾಲಕ ರಾಧಾಕೃಷ್ಣನ್, ಗ್ರಾಮಪಂಚಾಯತಿ ಉಪಾಧ್ಯಕ್ಷೆ ಶಾಂತಾಕುಮಾರಿ, ಸ್ಥಾಯೀಸಮಿತಿ ಅಧ್ಯಕ್ಷ ಶಾಹಿದಾ ಮಹಮ್ಮದ್ ಕುಂಞÂ, ಮಹಮ್ಮದ್ ತೈವಳಪ್, ಎನ್.ಎ.ತಾಹಿರ್, ಸದಾನಂದನ್, ಎಂ.ಸಿ.ಎ.ಫೈಝಲ್, ಸಫಿಯಾ, ನಾಸರ್ ಕಾಟುಕೊಚ್ಚಿ, ಅಬ್ದುಲ್ಲಕುಂಞÂ, ಸಿಂಧು, ಮಣಿ ಚಂದ್ರಕುಮಾರಿ, ಜಯಶ್ರೀ, ಎ.ಮಮ್ಮುಂಞÂ, ಓಮನಾ, ರಶೀದಾ, ಪಂಚಾಯತಿ ಕಾರ್ಯದರ್ಶಿ ಎಂ.ಸುರೇಂದ್ರನ್, ಎಡನೀರು ಸ್ವಾಮೀಜೀಸ್ ಶಾಲೆ ಪ್ರಬಂಧಕ ಜಯರಾಮ ಮಂಜತ್ತಾಯ, ಎನ್.ಎಸ್.ಎಸ್.ಸಂಚಾಲಕ ಮಧುಸೂದನನ್, ವೇಣು ಮಾಸ್ಟರ್, ಬಾಲಕೃಷ್ಣ ವೋರ್ಕೂಡ್ಲು, ಮಹಮ್ಮದ್ ಕುಂಞÂ ಕಡವತ್, ಉದ್ಯೋಗ ಖಾತರೀ ಯೋಜನೆಯ ಅಭಿಯಂತರ ದೀಪು ಮೊದಲಾದವರು ಉಪಸ್ಥಿತರಿದ್ದರು.


