ಕುಂಬಳೆ ಪಂಚಾಯತಿ ಅಭಿವೃದ್ಧಿ ಸೆಮಿನಾರ್
0
ಡಿಸೆಂಬರ್ 19, 2018
ಕುಂಬಳೆ: ಕುಂಬಳೆ ಗ್ರಾಮ ಪಂಚಾಯತಿ ಅಭಿವೃದ್ಧಿ ವಿಚಾರ ಸಂಕಿರಣ ಇತ್ತೀಚೆಗೆ ಕುಂಬಳೆ ಕೃಷಿ ಭವನದಲ್ಲಿ ನಡೆಯಿತು.ಗ್ರಾಮ ಪಂ.ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಪಂಚಾಯತಿ ಅಧ್ಯಕ್ಷ ಮುಹಮ್ಮದ್ ಕುಂಞ ಉದ್ಘಾಟಿಸಿದರು. ಕರಡು ಮಂಡಣೆಯನ್ನು ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಬಿ.ಎನ್.ಮೊಹಮ್ಮದಲಿ ನೆರವೇರಿಸಿದರು. .ಆರೋಗ್ಯ ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಅಧ್ಯಕ್ಷ ಎ.ಕೆ.ಆರಿಫ್, ಕ್ಷೇಮ ಕಾರ್ಯ ಸಮಿತಿ ಅಧ್ಯಕ್ಷೆ ಫಾತಿಮಾ ಅಬ್ದುಲ್ಲ ಕುಂಞ, ವಿ.ಪಿ.ಅಬ್ದುಲ್ಲ ಖಾದರ್, ಮುರಲೀಧರ ಯಾದವ್, ಸುಕೇಶ್ ಭಂಡಾರಿ, ಮಾಜಿ ಅಧ್ಯಕ್ಷ ಎಂ.ಅಬ್ಬಾಸ್, ಮಂಜುನಾಥ ಆಳ್ವ ಶುಭಾಶಂಸನೆ ಗೈದರು. ಗ್ರಾ.ಪಂ. ಸದಸ್ಯರಾದ ಝೈನಬಾ, ಫಾತಿಮತ್ ಝೌರ, ಮರಿಯಮ್ಮ ಮೂಸ, ಹಪ್ಸ, ಅರುಣ.ಎಂ.ಆಳ್ವ, ಹರೀಶ್, ಸುಜಿತ್ ರೈ, ಪುಷ್ಪಲತಾ.ಎನ್, ಆಯಿಷಾ, ಪುಷ್ಪಲತಾ, ಕೈರುನ್ನಿಸ, ಮೊಹಮ್ಮದ್ ಕುಂಞ, ಸುಧಾಕರ ಕಾಮತ್ ಉಪಸ್ಥಿತರಿದ್ದರು.ಪಂ.ಕಾರ್ಯದರ್ಶಿ ಶೈನ್‍ಕುಮಾರ್ ಸ್ವಾಗತಿಸಿ, ಯೋಜನಾ ನೌಕರೆ ಶೈನಿ ವಂದಿಸಿದರು.


