ಶೇಷವನ ಷಷ್ಠಿ ಜಾತ್ರೆ ಸಂಪನ್ನ
0
ಡಿಸೆಂಬರ್ 16, 2018
ಮಧೂರು: ಕೂಡ್ಲು ಶೇಷವನ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದಲ್ಲಿ ಚಂಪಾ ಷಷ್ಠಿ ಉತ್ಸವವು ತಂತ್ರಿವರ್ಯರಾದ ಅರವತ್ ಪದ್ಮನಾಭನ್ ತಂತ್ರಿಗಳ ನೇತೃತ್ವದಲ್ಲಿ ವೈಭವದೊಂದಿಗೆ ಸಂಪನ್ನ ಗೊಂಡಿತು. ಬೆಳಗ್ಗೆ ಗಣಪತಿಹವನ, ಬಿಂಬ ಶುದ್ಧಿ, ಕಲಶ ಪೂಜೆ, ಕಲಶಾಭಿಷೇಕ ಮಹಾಪೂಜೆ, ಶ್ರೀ ನಾಗ ಸನ್ನಿಧಿ ಹಾಗು ರಕ್ತೇಶ್ವರಿ ಗುಳಿಗ ಸನ್ನಿಧಿಯಲ್ಲಿ ತಂಬಿಲ ಮತ್ತು ಪೂಜೆ ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ಜರಗಿತು.
ಸಂಜೆ ತಾಯಂಬಕ ನಂತರ ಶೇಷವನ ಭಕ್ತವೃಂದದವರಿಂದ ಭಜನೆ, ರಾತ್ರಿ ಪೂಜೆ, ಶ್ರೀಭೂತಬಲಿ, ವಿಶೇಷ ಪಂಚವಾದ್ಯಸೇವೆ, ಸಿಡಿಮದ್ದು ಸೇವೆ, ದರ್ಶನಬಲಿ ರಾಜಾಂಗಣ ಪ್ರಸಾದ ವಿತರಣೆಯೊಂದಿಗೆ ಸಂಪನ್ನ ಗೊಂಡಿತು.
ಶ್ರೀ ದೆವರ ಉತ್ಸವಬಲಿ ಮೂರ್ತಿಗೆ ಭಕ್ತರೋರ್ವರು ಸ್ವರ್ಣಕವಚವನ್ನು ಸಮರ್ಪಿಸಿದರು. ಅನುವಂಶಿಕ ಮೊಕ್ತೇಸರ ಸದಾಶಿವ, ಆಡಳಿತ ಮೊಕ್ತೇಸರ ವೇಣುಗೋಪಾಲ ಕೂಡ್ಲು, ಕಾರ್ಯದರ್ಶಿ ಸುರೇಶ್ ಮಣಿಯಾಣಿ, ಕೋರ್ಶಾಇಕಾರಿ ಪ್ರಕಾಶ್ ಶೆಟ್ಟಿ, ಹಾಗು ಟ್ರಸ್ಟಿಗಳಾದ ಸುರೇಶ್ ನಾಯ್ಕ್, ಶಶಿಂದ್ರನ್, ಗೋಪಾಲಕೃಷ್ಣ ಬಲ್ಯಾಯ, ವಸಂತ ನಾಂಗುರಿ, ಉತ್ಸವ ಸಮಿತಿಯ ಗೌರವ ಅಧ್ಯಕ್ಷರಾದ ಮಧೂರು ಕ್ಷೇತ್ರದ ಪ್ರಧಾನ ಅರ್ಚಕ ಶ್ರೀಕೃಷ್ಣ ಉಪಾದ್ಯಾಯ, ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಯುವಕ ಸಂಘದ ಅಧ್ಯಕ್ಷ ಮಹೇಶ ಕನ್ನಿಗುಡ್ಡೆ, ಕಾರ್ಯದರ್ಶಿ ರೋಹಿತ್, ಕೋಶಾಧಿಕಾರಿ ಗೋಪಾಲ ಪಾಯಿಚ್ಚಾಲು, ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಮಹಿಳಾ ಸಂಘದ ಅಧ್ಯಕ್ಷೆ ದೀಪಾ ನಾಂಗುರಿ, ಕೋಶಾಧಿಕಾರಿ ಜಯಲಕ್ಷ್ಮಿ ಅಡಪ ಹಾಗು ಸದಸ್ಯರು ಸಹಕರಿಸಿದರು.

