ಮನೆ ಮನೆಗಳಲ್ಲಿ ಸುಗಮ ಸಂಗೀತ ಕಾರ್ಯಕ್ರಮ `ಹಚ್ಚೇವು ಕನ್ನಡದ ದೀಪ'
0
ಡಿಸೆಂಬರ್ 26, 2018
ಕಾಸರಗೋಡು: ಕರ್ನಾಟಕ ಸುಗಮ ಸಂಗೀತ ಪರಿಷತ್ ಬೆಂಗಳೂರು ಇದರ ಕಾಸರಗೋಡು ಘಟಕವು ಆಯೋಜಿಸಿರುವ ಮನೆ ಮನೆಗಳಲ್ಲಿ ಸುಗಮ ಸಂಗೀತ `ಹಚ್ಚೇವು ಕನ್ನಡ ದೀಪ' ಕಾರ್ಯಕ್ರಮವು ಅಣಂಗೂರಿನಲ್ಲಿರುವ ಘಟಕದ ಅಧ್ಯಕ್ಷೆ ಶಾಹಿರತ್ನ ಬಾಲಕೃಷ್ಣ ಅವರ ಮನೆಯಲ್ಲಿ ಇತ್ತೀಚೆಗೆ ಜರಗಿತು.
ಭಾರತಿ ಬಾಬು, ಶ್ಯಾಮಲಾ ರವಿರಾಜ್, ಪದ್ಮಾವತಿ ಬಿ.ಎಸ್.ರಾವ್, ಶಾಹಿರತ್ನ ಬಾಲಕೃಷ್ಣ, ಲೀಲಾಧರ ಆಚಾರ್ಯ ಅಶೋಕನಗರ, ದಿವಾಕರ್ ಅಶೋಕನಗರ ಭಾವ ಗಾಯನ ಹಾಡಿದರು. ಹಿರಿಯರಾದ ರಾಜೀವಿ ಅಮ್ಮ ಅವರು ಉಪಸ್ಥಿತರಿದ್ದರು.


