ವಿದ್ಯಾರ್ಥಿಗಳಿಂದ ಭಜನಾ ಕಾರ್ಯಕ್ರಮ
0
ಡಿಸೆಂಬರ್ 26, 2018
ಬದಿಯಡ್ಕ: ಕುಂಟಾಲುಮೂಲೆ ಶ್ರೀ ಆದಿಶಕ್ತಿ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ ವಾರ್ಷಿಕೋತ್ಸವದ ಅಂಗವಾಗಿ ರಂಗಸಿರಿಯ ಸುಗಮ ಸಂಗೀತ ವಿದ್ಯಾರ್ಥಿಗಳು ಭಜನಾ ಕಾರ್ಯಕ್ರಮವನ್ನು ನಡೆಸಿದರು.
ಆಧುನಿಕ ಜಗತ್ತಿನಲ್ಲಿ ಯುವ ಪೀಳಿಗೆಯು ನಮ್ಮ ಮಣ್ಣಿನ ಸಂಸ್ಕøತಿಯತ್ತ ಸೆಳೆಯಲು ಬದಿಯಡ್ಕದ ರಂಗಸಿರಿ ಸಾಂಸ್ಕøತಿಕ ವೇದಿಕೆಯು ಶ್ರಮಿಸುತ್ತಿದೆ. ಪ್ರತೀ ವಾರ ಬದಿಯಡ್ಕದಲ್ಲಿ ಯಕ್ಷಗಾನ, ಶಾಸ್ತ್ರೀಯ ಮತ್ತು ಸುಗಮ ಸಂಗೀತ ತರಗತಿಗಳನ್ನು ನಡೆಸುತ್ತಿದೆ. ರಂಗಸಿರಿಯ ಕಾರ್ಯಚಟುವಟಿಕೆಗೊಂದು ಹೊಸ ಸೇರ್ಪಡೆ ಭಜನಾ ತಂಡ. ಸಂಸ್ಥೆಯ ಸುಗಮ ಸಂಗೀತ ವಿಭಾಗದ ವಿದ್ಯಾರ್ಥಿಗಳ ಈ ತಂಡ ಉತ್ತಮವಾಗಿ ಭಜನೆಯ ಮೂಲಕ ಭಕ್ತಿ ಹರಡುವ ಕಾರ್ಯದಲ್ಲಿ ಸಾಗುತ್ತಿದೆ.
ರಂಗಸಿರಿಯ ಸುಗಮ ಸಂಗೀತದ ಶಿಕ್ಷಕಿಯಾಗಿರುವ ಡಾ.ಸ್ನೇಹಾ ಪ್ರಕಾಶ್ ಪೆರ್ಮುಖ ಅವರು ತಮ್ಮ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಈ ಉತ್ತಮ ತಂಡವನ್ನು ಸಿದ್ಧಪಡಿಸಿದ್ದಾರೆ. ಈಗಾಗಲೇ ಸುಗಮ ಸಂಗೀತ ವಿದ್ಯಾರ್ಥಿಗಳಿಂದ ದೃಶ್ಯ ಕಾವ್ಯ, ಕುಂಚ ಗಾಯನ, ಭಕ್ತಿ ಭಾವ ಜಾನಪದ ಹಾಡುಗಳನ್ನೊಳಗೊಂಡ ರಸಮಂಜರಿ ಕಾರ್ಯಕ್ರಮವನ್ನು ಇವರ ಮಾರ್ಗದರ್ಶನದಲ್ಲಿ ರಂಗಸಿರಿಯ ವಿದ್ಯಾರ್ಥಿಗಳು ನಡೆಸಿದ್ದಾರೆ. ಶಿಕ್ಷಕಿ ಡಾ.ಸ್ನೇಹಾ ಪ್ರಕಾಶ್ ಮಾರ್ಗದರ್ಶನದಲ್ಲಿ ರಂಗಸಿರಿಯ ಭಜನಾ ತಂಡದ ಅನ್ವಿತ, ಶತೋದರಿ, ಅನಘ್ರ್ಯ, ನವ್ಯ, ಸಮನ್ವಿತ, ಪ್ರಗತಿ, ಧನ್ಯ, ಅಭಿನವ್ ಉತ್ತಮವಾಗಿ ಭಕ್ತಿ ಭಾವ ಭರಿತ ಭಜನೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ರಮೇಶ ಕುಂಟಾಲುಮೂಲೆ ತಬಲಾಸಾಥ್ ನೀಡಿ ಭಜನೆಯ ಅಂದ ಹೆಚ್ಚಿಸಿದರು.


