ಶಿವಳ್ಳಿ ಬ್ರಾಹ್ಮಣಸಭಾ ಜಿಲ್ಲಾ ಸಮ್ಮೇಳನ
0
ಡಿಸೆಂಬರ್ 26, 2018
ಕಾಸರಗೋಡು: ಶಿವಳ್ಳಿ ಬ್ರಾಹ್ಮಣ ಸಭಾ ಜಿಲ್ಲಾ ಸಮ್ಮೇಳನವನ್ನು ಕಾಂಞಂಗಾಡ್‍ನ ಕಾರಾಟ್‍ವಯಲ್ ವೆಂಕಟರಮಣ ದೇವಸ್ಥಾನದ ಆಡಿಟೋರಿಯಂನಲ್ಲಿ ಮಂಗಳವಾರ ನಡೆಯಿತು. ಸಮ್ಮೇಳನವನ್ನು ಉಡುಪಿ ಮಾಧ್ವಬ್ರಾಹ್ಮಣ ಸಭಾ ಜೊತೆ ಕಾರ್ಯದರ್ಶಿ ಎಂ.ಯೋಗೇಶ್ ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷ ಲಕ್ಷ್ಮೀಶ ರಾವ್ ಕಡಬ ಅಧ್ಯಕ್ಷತೆ ವಹಿಸಿದರು. ಹರಿನಾರಾಯಣ, ಮಹಿಳಾ ಅಧ್ಯಕ್ಷೆ ಸುನೀತಾ ಬೈಪಡಿತ್ತಾಯ, ವಿಷ್ಣು, ಟಿ.ಕೆ.ಮಂಜುನಾಥ, ಡಾ.ಯು.ಪಿ.ಕುಣಿಕುಳ್ಳಾಯ, ಡಾ.ಕೃಷ್ಣ ಕುಮಾರಿ, ಎ.ಪಿ.ಶ್ರೀನಿವಾಸ ಮೊದಲಾದವರು ಮಾತನಾಡಿದರು.
ಜಿಲ್ಲಾ ಕಾರ್ಯದರ್ಶಿ ಅರವಿಂದ ಕುಮಾರ್ ಅಲೆವೂರಾಯ ಸ್ವಾಗತಿಸಿದರು. ಕಾರ್ಯಕ್ರಮದಂಗವಾಗಿ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಿತು. ಇದೇ ಸಂದರ್ಭದಲ್ಲಿ ಹಿರಿಯ ಧುರೀಣರನ್ನು ಗೌರವಿಸಲಾಯಿತು. ಸಾಧಕರಾದ ಎಂ.ಯೋಗೇಶ್ ಅವರನ್ನು ಈ ಸಂದರ್ಭ ಡಾ.ಯು.ಪಿ.ಕುಣಿಕುಳ್ಳಾಯ ಗೌರವಿಸಿದರು.


