ಬ್ಯಾಂಕ್ ವಿಲೀನ ಪ್ರತಿಭಟಿಸಿ ಬ್ಯಾಂಕ್ ನೌಕರರ ಮುಷ್ಕರ
0
ಡಿಸೆಂಬರ್ 26, 2018
ಕಾಸರಗೋಡು: ಬ್ಯಾಂಕ್ ವಿಲೀನ ವಿರುದ್ಧ ಯುನೈಟೆಡ್ ಫಾರಂ ಆಫ್ ಬ್ಯಾಂಕ್ ಯೂನಿಯನ್(ಯುಎಫ್‍ಬಿಯು) ನೇತೃತ್ವದಲ್ಲಿ ಬ್ಯಾಂಕ್ ಸಿಬ್ಬಂದಿಗಳು ಬುಧವಾರ ಮುಷ್ಕರ ನಡೆಸಿದರು. ಇದರಂಗವಾಗಿ ಕಾಸರಗೋಡು ನಗರದ ವಿಜಯ ಬ್ಯಾಂಕ್ ಮುಂಭಾಗ ಪ್ರತಿಭಟನೆ ನಡೆಯಿತು.
ಬ್ಯಾಂಕ್ ಆಫ್ ಬರೋಡ, ದೇನಾ ಬ್ಯಾಂಕ್, ವಿಜಯಾ ಬ್ಯಾಂಕ್‍ಗಳನ್ನು ಪರಸ್ಪರ ವಿಲೀನಗೊಳಿಸುವ ಯೋಜನೆಯಿಂದ ಹಿಂದೆ ಸರಿಯಬೇಕು, ಜನಪರ ಬ್ಯಾಂಕ್ ಅಸ್ತಿತ್ವ ಉಳಿಸಿಕೊಳ್ಳಬೇಕು, ಉದ್ಯೋಗ ಸಾಧ್ಯತೆಯನ್ನು ಇಲ್ಲವಾಗಿಸುವ ಕ್ರಮದಿಂದ ಹಿಂದೆ ಸರಿಯಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ಬ್ಯಾಂಕಿಂಗ್ ರಂಗದ ವಿವಿಧ ಸಂಘಟನೆಗಳ ಐಕ್ಯ ಫಾರಂ ಯುಎಫ್‍ಬಿಯು ನೇತೃತ್ವದಲ್ಲಿ ನಡೆದ ಮುಷ್ಕರ ಜಿಲ್ಲೆಯಲ್ಲಿ ಪೂರ್ಣವಾಗಿತ್ತು.
ಕಾಸರಗೋಡು ವಿಜಯಾ ಬ್ಯಾಂಕ್ ಮುಂಭಾಗ ನಡೆದ ಪ್ರತಿಭಟನೆಗೆ ಕೆ.ಕುಂಞÂಕೃಷ್ಣನ್ ನಾಯರ್, ಟಿ.ರಾಜನ್, ಇ.ವಿ.ಮೋಹನನ್ ಮೊದಲಾದವರು ನೇತೃತ್ವ ನೀಡಿದರು.

