ಅಡೂರು ಕ್ಷೇತ್ರ ವರ್ಷಾವಧಿ ಜಾತ್ರೋತ್ಸವ ಸಮಿತಿ ರಚನೆ ಸಭೆ
0
ಡಿಸೆಂಬರ್ 26, 2018
ಮುಳ್ಳೇರಿಯ: ಕುಂಬಳೆ ಸೀಮೆಯ ನಾಲ್ಕು ಪ್ರಧಾನ ದೇವಾಲುಯಗಳಲ್ಲಿ ಒಂದಾದ ಅಡೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ಮಹಾವಿಷ್ಣು ವಿನಾಯಕ ಕ್ಷೇತ್ರದ ವರ್ಷಾವಧಿ ಜಾತ್ರೆಯು ಮಾ.12 ರಂದು ಧ್ವಜಾರೋಹಣವಾಗಿ ಮಾ. 20 ರ ವರೆಗೆ ಶ್ರೀ ಕ್ಷೇತ್ರದ ತಂತ್ರಿವರ್ಯರಾದ ವೇದಮೂರ್ತಿ ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರು ಅವರ ನೇತೃತ್ವದಲ್ಲಿ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಈ ಮಹೋತ್ಸವವನ್ನು ನಡೆಸುವ ಸಲುವಾಗಿ ಸೀಮೆಯ ಭಕ್ತಾದಿಗಳ ಸಭೆ ಇತ್ತೀಚೆಗೆ ಶ್ರೀಕ್ಷೇತ್ರದಲ್ಲಿ ನಡೆಯಿತು. ಜಾತ್ರೋತ್ಸವ ಸಮಿತಿಯನ್ನು, ಹದಿನೈದು ಉಪ ಸಮಿತಿಯ ರಚನೆಯೊಂದಿಗೆ ಜೀರ್ಣೊದ್ಧಾರ ಸಮಿತಿಯ ಅಧ್ಯಕ್ಷ ಬದಿಯಡ್ಕ ವಸಂತ ಪೈ ಅವರನ್ನು ಗೌರವಾಧ್ಯಕ್ಷರನ್ನಾಗಿ, ಅತ್ತನಾಡಿ ರಾಮಚಂದ್ರ ಮಣಿಯಾಣಿ ಅವರನ್ನು ಅಧ್ಯಕ್ಷರನ್ನಾಗಿ ಆರಿಸಿ ಐದು ಪಾರಂಪರಿಕ ಮನೆತನಗಳ ಸದಸ್ಯರನ್ನು ಮುಂದಿರಿಸಿಕೊಂಡು ಸಮಿತಿಯನ್ನು ರಚಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ನಿರ್ವಹಿಸಿದ ಕಾರ್ಯನಿರ್ವಹಣಾಧಿಕಾರಿ ಜಗದೀಶ ಪ್ರಸಾದ್ ಮಾತನಾಡಿ, ಸರಕಾರಿ ಸುತ್ತೋಲೆಯ ಪ್ರಕಾರ ಜಾತ್ರೋತ್ಸವದ ವೇಳೆ ಬಹುಸಹಸ್ರ ಭಕ್ತರು ಭಾಗವಹಿಸುವ ಜಾತ್ರೆಯಲ್ಲಿ ಅನುಸರಿಸಬೇಕಾದ ನೀತಿ ನಿಯಮಾವಳಿಗಳನ್ನು ಸೋದಾಹರಣವಾಗಿ ವಿವರಿಸಿದರು.
ವೇದಿಕೆಯಲ್ಲಿ ಶ್ರೀಪತಿ ರಾವ್ ಗುಂಡಿಮನೆ, ಪ್ರಭಾಕರ ರಾವ್ ಕುರ್ನೂರು, ಮಂಡೆಬೆಟ್ಟಿ ಪ್ರಭಾಕರ ನಾೈಕ್, ಅತ್ತನಾಡಿ ರಾಮಚಂದ್ರ ಮಣಿಯಾಣಿ, ಪೆರಿಯಡ್ಕ ಚಂದ್ರಶೇಖರ ರಾವ್ ಉಪಸ್ಥಿತರಿದ್ದು, ಸಹಕರಿಸಿದರು.
ಜೀರ್ಣೋದ್ಧಾರ ಸಮಿತಿ ಸದಸ್ಯರಾದ ಬಾಲಕೃಷ್ಣ ಮೂಡಿತ್ತಾಯ, ಎ.ಪಿ.ಕುಶಲನ್ ಪರಪ್ಪ, ರಮೇಶ ಮಣಿಯಾಣಿ ಚೀನಪ್ಪಾಡಿ, ಕಾಂತಡ್ಕ ಗಂಗಾಧರ ರಾವ್, ಅಶೋಕ ನಾೈಕ್ ಪಾಂಡಿ, ಅಕ್ಕಪ್ಪಾಡಿ ಕೃಷ್ಣ ಮಣಿಯಾಣಿ, ಪ್ರಾದೇಶಿಕ ಸಮಿತಿಯ ಅಧ್ಯಕ್ಷರುಗಳು, ಸಂಚಾಲಕರುಗಳು ಉಪಸ್ಥಿತರಿದ್ದು ಸಲಹೆ ಸೂಚನೆ ನೀಡಿದರು.
ಕ್ಷೇತ್ರದ ಪ್ರಬಂಧಕ ಎ.ಗಂಗಾದರ ರಾವ್ ಸ್ವಾಗತಿಸಿ, ಸಾಂಸ್ಕøತಿಕ ಸಮಿತಿ ಅಧ್ಯಕ್ಷ ಬೆಳ್ಳಿಪ್ಪಾಡಿ ಸದಾಶಿವ ರೈ ವಂದಿಸಿದರು.


