ಗ್ರಾಮೀಣ ಬ್ಯಾಂಕ್ ಮುಷ್ಕರ ಹತ್ತನೇ ದಿನಕ್ಕೆ
0
ಡಿಸೆಂಬರ್ 26, 2018
ಕಾಸರಗೋಡು: ತಾತ್ಕಾಲಿಕ ನೌಕರರನ್ನು ಪೂರ್ಣಕಾಲಿಕ ನೌಕರರನ್ನಾಗಿ ಪರಿಗಣಿಸಬೇಕು, ಫ್ಯೂನ್/ಎಟೆಂಡರ್ ಹುದ್ದೆಗೆ ನೇಮಕಾತಿ ನಡೆಸಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ಕೇರಳ ಗ್ರಾಮೀಣ ಬ್ಯಾಂಕ್ ನೌಕರರು ನಡೆಸುತ್ತಿರುವ ಮುಷ್ಕರ ಹತ್ತನೇ ದಿನಕ್ಕೆ ಕಾಲಿರಿಸಿದೆ.
ಮುಷ್ಕರದಿಂದಾಗಿ ಮಲಪ್ಪುರ ಕೇಂದ್ರವಾಗಿ ಕಾರ್ಯವೆಸಗುತ್ತಿರುವ ಕೇರಳ ಗ್ರಾಮೀಣ ಬ್ಯಾಂಕ್‍ನ 633 ಶಾಖೆಗಳು ಮತ್ತು 10 ವಿಭಾಗೀಯ ಕಚೇರಿಗಳು, ಕೇಂದ್ರ ಕಚೇರಿ ಕಾರ್ಯಾಚರಣೆ ಸಂಪೂರ್ಣ ಸ್ತಂಭನಗೊಂಡಿದೆ. ಡಿ.17 ರಿಂದ ಮುಷ್ಕರ ಆರಂಭಗೊಂಡಿತ್ತು.
ಕಳೆದ ಹತ್ತು, ಹದಿನೈದು ವರ್ಷಗಳಿಂದ ದಿನ ವೇತನದ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ಉದ್ಯೋಗಿಗಳನ್ನು ಖಾಯಂಗೊಳಿಸಬೇಕೆಂದು ಆಗ್ರಹಿಸಿ ಮುಷ್ಕರ ಆಯೋಜಿಸಲಾಗಿದೆ.

