ಪಳ್ಳತ್ತಡ್ಕದಲ್ಲಿ ಕ್ರಿಸ್‍ಮಸ್ ಆಚರಣೆ
0
ಡಿಸೆಂಬರ್ 22, 2018
ಬದಿಯಡ್ಕ: ಪಳ್ಳತ್ತಡ್ಕ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ರಿಸ್ಮಸ್ ಹಬ್ಬದ ಆಚರಣೆಯು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಕ್ರಿಸ್ಮಸ್ ನಕ್ಷತ್ರಗಳನ್ನು ಬಣ್ಣದ ಕಾಗದಗಳಿಂದ ಮಕ್ಕಳು ಸ್ವತಃ ತಯಾರಿಸಿ ಮಾದರಿಯಾದರು.ಪ್ರಕೃತಿದತ್ತ ವಸ್ತುಗಳಿಂದ , ಯೇಸುವಿನ ಜನನ ಸಂದೇಶ- ಸನ್ನಿವೇಶವನ್ನು ಬಿಂಬಿಸುವ , ಗೋದಲಿಯನ್ನು ಆಕರ್ಷಕವಾಗಿ ಸೃಜನಶೀಲತೆಯೊಂದಿಗೆ ಅಧ್ಯಾಪಕರೊಡಗೂಡಿ ಮಕ್ಕಳು ನಿರ್ಮಿಸಿದರು. ಅದೇ ರೀತಿ ಅಧ್ಯಾಪಕರ ನಿರ್ದೇಶನದಂತೆ ಕ್ರಿಸ್ಮಸ್ ಮರಕ್ಕೆ ಅಲಂಕಾರ ಮಾಡುವ ಕಾರ್ಯದಲ್ಲಿ ಮಕ್ಕಳು ಸಕ್ರಿಯವಾಗಿ ಭಾಗವಹಿಸಿದರು.
ಕ್ರಿಸ್ಮಸ್ ಹಬ್ಬದ ವಿಶೇಷ ಆಕರ್ಷಣೆದ ಕ್ರಿಸ್ಮಸ್ ತಾತನಾಗಿ ಪುಟ್ಟ ಬಾಲಕನೊಬ್ಬ ಬಂದು ಮಕ್ಕಳೊಂದಿಗೆ ಹಾಡಿ, ಕುಣಿದು,ಕುಪ್ಪಳಿಸಿ, ಸಿಹಿಯನ್ನು ಹಂಚಿದಾಗ ಮಕ್ಕಳ ಹರ್ಷೋದ್ಘಾರ ಮುಗಿಲು ಮುಟ್ಟಿತು. ಪ್ರೀತ್ಯಾದಾರಗಳ ಸಂದೇಶ ನೀಡಿ, ಶುಭ ಹಾರೈಸಿದ ತಾತನನ್ನು ನೋಡಿ ಮಕ್ಕಳಿಗಾದ ಸಂತೋಷ ಅಷ್ಟಿಷ್ಟಲ್ಲ. ಹಬ್ಬದ ಕುರಿತಾದ ಮಾಹಿತಿಯನ್ನು ಅಧ್ಯಾಪಕರು ಮಕ್ಕಳಿಗೆ ಹೇಳಿಕೊಟ್ಟರು. ಆಚರಣೆಯ ನೈಜ ಚಿತ್ರೀಕರಣ ಹಾಗೂ ಮಾಹಿತಿಯು ಜೊತೆಸೇರಿದಾಗ ಹಬ್ಬದ ಕುರಿತು ತಿಳಿಯಲು ಮಕ್ಕಳಿಗೆ ಹೆಚ್ಚು ಸುಲಭವೆನಿಸುವುದು. ಮಕ್ಕಳ ಹೆತ್ತವರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಶಾಲಾ ವ್ಯವಸ್ಥಾಪಕರ ವತಿಯಿಂದ ಶ್ಯಾಮಲಾ ಎಸ್ ಎನ್ ಭಟ್ ಪಾಲ್ಗೊಂಡರು.






