ಪೆರ್ಲ ಬಡ್ಸ್ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆ
0
ಡಿಸೆಂಬರ್ 22, 2018
ಪೆರ್ಲ:ಕೋಝಿಕ್ಕೋಡ್ ಮೂಲದ 'ಕಾನ' ಹೆಸರಿನ ಸಂಘಟನೆಯ ನೇತೃತ್ವದಲ್ಲಿ ಎಣ್ಮಕಜೆ ಪಂಚಾಯಿತಿಯ ಕನ್ನಟಿಕಾನ 'ಸಾಂತ್ವನಂ' ಬಡ್ಸ್ ಶಾಲೆಯಲ್ಲಿ ಶುಕ್ರವಾರ ಕ್ರಿಸ್ಮಸ್ ಹಬ್ಬ ಆಚರಿಸಲಾಯಿತು.
ಸಂಘಟನೆಯ ನೇತೃತ್ವ ವಹಿಸಿದ ಬಿಂದು ಫನಾರ್ಂಡಿಸ್ ಕೇಕ್ ಕತ್ತರಿಸುವ ಮೂಲಕ ಕ್ರಿಸ್ಮಸ್ ಆಚರಣೆಗೆ ಚಾಲನೆ ನೀಡಿದರು.ಪಂಚಾಯಿತಿ ಅಧ್ಯಕ್ಷೆ ಶಾರದಾ ವೈ.ಅಧ್ಯಕ್ಷತೆ ವಹಿಸಿದರು. ಪಂಚಾಯಿತಿ ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷೆ ಜಯಶ್ರೀ ಕುಲಾಲ್, ಕ್ಷೇಮ ಕಾರ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ಚಂದ್ರಮತಿ, ಆರೋಗ್ಯ ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಅಧ್ಯಕ್ಷೆ ಆಯಿಶಾ ಎ.ಎ., ಸಂಘಟನೆಯ ಸದಸ್ಯರಾದ ಅಬ್ದುಲ್ ಹಕಿಂ, ಹಾರಿಸ್, ಅಶೋಕನ್ ಶುಭ ಹಾರೈಸಿದರು
ಮಕ್ಕಳಿಗೆ ಸಿಹಿತಿಂಡಿ, ಉಡುಗೊರೆ, ಮಧ್ಯಾಹ್ನದ ಊಟ, ಮೊದಲಾದ ವಿಶಿಷ್ಟ ರೀತಿಯ ಕ್ರಿಸ್ಮಸ್ ಆಚರಣೆ ಮಕ್ಕಳಿಗೆ ಹೊಸ ಅನುಭವ ನೀಡಿತು.ಬಡ್ಸ್ ಶಾಲಾ ಮುಖ್ಯ ಶಿಕ್ಷಕಿ ಮರಿಯಂ ಸ್ವಾಗತಿಸಿ, ವಂದಿಸಿದರು.

