ಕೋಳ್ಯೂರು ಕ್ಷೇತ್ರದ ವಾರ್ಷಿಕ ಜಾತ್ರೆ
0
ಡಿಸೆಂಬರ್ 24, 2018
ಮಂಜೇಶ್ವರ: ಕೋಳ್ಯೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವರ್ಷಾವಧಿ ಜಾತ್ರೆ ಮತ್ತು ಮಂಡಲ ಪೂಜೆಯು ಜನವರಿ 2ರಿಂದ 4ರ ತನಕ ಜರಗಲಿದೆ. ವೇದಮೂರ್ತಿ ವರ್ಕಾಡಿ ದಿನೇಶಕೃಷ್ಣ ತಂತ್ರಿಗಳು ನೇತೃತ್ವ ವಹಿಸಲಿದ್ದಾರೆ. ಜ.2ರಂದು ಸಂಜೆ 6.30ಕ್ಕೆ ಭಜನೆ, ರಾತ್ರಿ 8ಗಂಟೆಗೆ ಪ್ರಾರ್ಥನೆ, ಶ್ರೀ ದೇವರಿಗೆ ಕಾರ್ತಿಕ ಪೂಜೆ, ಬಲಿ ಉತ್ಸವ ನಡೆಯಲಿದೆ.
ಜ.3ರಂದು ಬೆಳಿಗ್ಗೆ 6ಕ್ಕೆ ಉಷ:ಪೂಜೆ, ಶ್ರೀ ನಾರಾಯಣ ದೇವರ ಬಲಿ ಉತ್ಸವ, 9ಗಂಟೆಗೆ ಸ್ಮಿತಾ ಉದಯಪ್ರಕಾಶ್ ಬಳ್ಳಂಪದವು ಮತ್ತು ಬಳಗದವರಿಂದ ಸುಮಧುರ ಭಕ್ತಿಗೀತೆಗಳ ಗಾಯನ ಭಕ್ತಿ ಸುಮ ಕಾರ್ಯಕ್ರಮ, 10.30ಕ್ಕೆ ತುಲಾಭಾರ ಸೇವೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಬಲಿ ಉತ್ಸವ, ಅನ್ನ ಸಂತರ್ಪಣೆ, ಸಂಜೆ 5.30ಕ್ಕೆ ನಾಟ್ಯನಿಲಯ ಬಾಲಕೃಷ್ಣ ಮಂಜೇಶ್ವರ ಇವರ ಶಿಷ್ಯವೃಂದದವರಿಂದ ನಾಟ್ಯೋತ್ಸವಂ, ರಾತ್ರಿ 8.30ಕ್ಕೆ ಬಯ್ಯತ ಬಲಿ, ಕಟ್ಟೆ ಪೂಜೆ, ಉತ್ಸವ, ರಾತ್ರಿಯ ಪೂಜೆ ಬಲಿ ನೆರವೇರಲಿದೆ.
ಜ.4ರಂದು ಬೆಳಿಗ್ಗೆ 9ಕ್ಕೆ ಸ್ಯಾಕ್ಸೋಫೆÇೀನ್ ವಾದನ, 10ಕ್ಕೆ ಶ್ರೀ ದೇವರ ಬೆಳಗಿನ ಬಲಿ, ಉತ್ಸವ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ ವಿತರಣೆ, ಮಧ್ಯಾಹ್ನ 1ರಿಂದ ಅನ್ನ ಸಂತರ್ಪಣೆ, ಅಪರಾಹ್ನ 3ಕ್ಕೆ ಹವ್ಯಾಸಿ ಯಕ್ಷ ಕಲಾವಿದರು ಕೋಳ್ಯೂರು ಇವರಿಂದ ಮಖ ಸಂರಕ್ಷಣೆ - ಇಂದ್ರಜಿತು ಕಾಳಗ ಎಂಬ ಯಕ್ಷಗಾನ ಬಯಲಾಟ, ರಾತ್ರಿ 8ರಿಂದ ರಂಗಪೂಜೆ, ಭೂತಬಲಿ ಉತ್ಸವ, ಮಂತ್ರಾಕ್ಷತೆ ನಡೆಯಲಿದೆ.
ಇತರ ಕಾರ್ಯಕ್ರಮಗಳು : ಜ.8ರಂದು ಬೆಳಿಗ್ಗೆ 10ರಿಂದ ಮಂದ್ರಾಯಿ ದೈವದ ನೇಮ, ಜ.9ರಂದು ರಾತ್ರಿ ಶ್ರೀ ಮಹಾಗಣಪತಿ ದೇವರಿಗೆ ಮೂಡಪ್ಪ ಸೇವೆ, ಬಲಿ ಉತ್ಸವ, ಫೆ.17ರಂದು ಬ್ರಹ್ಮಕಲಶೋತ್ಸವದ ವಾರ್ಷಿಕೋತ್ಸವವನ್ನು ಹಮ್ಮಿಕೊಳ್ಳಲಾಗಿದೆ.


