ಶ್ರೀರಾಮ್ ಸಮಾಜ ಸೇವಾ ಸಂಸ್ಥೆಯಿಂದ 21ನೇ ಸಹಾಯ ಹಸ್ತ ಹಸ್ತಾಂತರ
0
ಡಿಸೆಂಬರ್ 24, 2018
ಮಂಜೇಶ್ವರ: ಸಾಮಾಜಿಕ ರಂಗದಲ್ಲಿ ಕಳೆದ 3 ವರ್ಷಗಳಿಂದ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿರುವ ಜೈ ಶ್ರೀರಾಮ್ ಸಮಾಜ ಸೇವಾ ಸಂಸ್ಥೆ ಮಂಜೇಶ್ವರ ಇದರ ಡಿಸೆಂಬರ್ ತಿಂಗಳ 21ನೇ ಯೋಜನೆಯ ಸಹಾಯ ಹಸ್ತವನ್ನು ಪೈವಳಿಕೆ ಪಂಚಾಯತಿ ಕಯ್ಯಾರು ಕೊಡೆತ್ತೋಡಿ ನಿವಾಸಿ ನಾರಾಯಣ-ಕಮಲ ದಂಪತಿ ಪುತ್ರ ಉಮೇಶ್ (46) ಇವರಿಗೆ ನೀಡಲಾಯಿತು.
ಪಾಶ್ರ್ವವಾಯು ಬಡಿದು ಶಯ್ಯಾವಸ್ಥೆಯಲ್ಲಿರುವ ಉಮೇಶ್‍ರ ಜೀವನಗಾಥೆಯನ್ನು ಅರಿತ ಜೈ ಶ್ರೀರಾಮ್ ಸಮಾಜ ಸೇವಾ ಸಂಸ್ಥೆ ಮಂಜೇಶ್ವರ ಇದೀಗ ಸಹಾಯ ಹಸ್ತವನ್ನು ಹಾಗೂ ಸಂಸ್ಥೆಯ ಸದಸ್ಯ ರೂಪೇಶ್ ಜೋಡುಕಲ್ಲು ಇದರ ವತಿಯಿಂದ ವಾಕರ್‍ಸ್ಟಿಕ್‍ನ್ನು ಉಮೇಶ್‍ರವರ ಮನೆಗೆ ತೆರಳಿ ನೀಡಲಾಯಿತು.
ಜೈ ಶ್ರೀರಾಮ್ ಸಮಾಜ ಸೇವಾ ಮಂಜೇಶ್ವರದ ಗೌರವ ಮಾರ್ಗದರ್ಶಕ ರಾಜ ಬೆಳ್ಚಾಪ್ಪಾಡ ಉದ್ಯಾವರದವರು ವಿಶೇಷ ಪ್ರಾರ್ಥನೆ ಸಲ್ಲಿಸಿ ಸಹಾಯ ಹಸ್ತವನ್ನು ಉಮೇಶ್ ದಂಪತಿಗಳಿಗೆ ನೀಡಿದರು. ಈ ವೇಳೆ ಸಂಸ್ಥೆಯ ಸ್ಥಾಪಕ ಪ್ರದೀಪ್ ಮೊರತ್ತಣೆ, ಅಧ್ಯಕ್ಷ ರತನ್ ಕುಮಾರ್ ಹೊಸಂಗಡಿ, ಗೌರವ ಸಲಹೆಗಾರರಾದ ನ್ಯಾಯವಾದಿ ನವೀನ್ ರಾಜ್ ಕೆ.ಜೆ., ಆಶಾ, ಲೋಕೇಶ್ ಮಾಡ, ಪ್ರಧಾನ ಸಂಚಾಲಕ ಸುಖೇಶ್ ಬೆಜ್ಜ, ಉಪಾಧ್ಯಕ್ಷ ಲೋಕೇಶ್ ಮಾಡ, ಕಾರ್ಯಕಾರಿ ಸಮಿತಿ ಸದಸ್ಯ ಜಯ ಮಣಿಂಪಾರೆ, ಸದಸ್ಯರಾದ ರಾಜೇಶ್ ಮಜಿಬೈಲ್, ರೂಪೇಶ್ ಜೋಡುಕಲ್ಲು, ಕೃಷ್ಣ ಅಟ್ಟೆಗೋಳಿ, ನಿತಿನ್ ಮಾನ್ಯ, ತಿಲಕ್ ಮೀಯಪದವು, ಗಿರೀಶ್ ಮುನ್ನಿಪ್ಪಾಡಿ ಮೊದಲಾದವರು ಉಪಸ್ಥಿತರಿದ್ದರು.


