ಚೇವಾರಿನಲ್ಲಿ ಮಲೆನಾಡು ಹೆದ್ದಾರಿ ನಿರ್ಮಾಣ ಕಾಮಗಾರಿ ಉದ್ಘಾಟನೆ
0
ಡಿಸೆಂಬರ್ 15, 2018
ಉಪ್ಪಳ: ಕೇರಳ ಸರಕಾರದ ಲೋಕೋಪಯೋಗಿ ಇಲಾಖೆಯ ಆಶ್ರಯದಲ್ಲಿ ಕಿಫ್ಬಿ ಯೋಜನೆಯಲ್ಲಿ ನಿರ್ಮಾಣವಾಗುತ್ತಿರುವ ಮಲೆನಾಡು ಹೆದ್ದಾರಿ ಕಾಮಗಾರಿ ನಿರ್ಮಾಣದ ಉದ್ಘಾಟನೆ ಪೈವಳಿಕೆ ಪಂಚಾಯತಿನ ಚೇವಾರ್ ಜಂಕ್ಷನ್‍ನಲ್ಲಿ ಇಂದು (ಭಾನುವಾರ)ನಡೆಯಲಿದೆ. ಕಾರ್ಯಕ್ರಮವನ್ನು ಕೇರಳ ರಾಜ್ಯ ಲೋಕೋಪಯೋಗಿ ಸಚಿವ ಜಿ.ಸುಧಾಕರನ್ ಉದ್ಘಾಟಿಸಲಿರುವರು. ಕಾಸರಗೋಡು ಸಂಸದ ಪಿ.ಕರುಣಾಕರನ್ ಅಧ್ಯಕ್ಷತೆ ವಹಿಸಲಿರುವರು. ಮುಖ್ಯ ಅತಿಥಿಗಳಾಗಿ ಕೋಝಿಕ್ಕೋಡ್ ಉತ್ತರ ವಲಯದ ರಸ್ತೆ ವಿಭಾಗದ ಹಿರಿಯ ಅಭಿಯಂತರ ಇ.ಜಿ.ವಿಶ್ವಪ್ರಕಾಶ್, ಜಿಲ್ಲಾಧಿಕಾರಿ ಡಾ.ಸಜಿತ್‍ಬಾಬು, ಮಂಜೇಶ್ವರ ಬ್ಲಾಕ್ ಪಂ.ಅಧ್ಯಕ್ಷ ಎಕೆಎಂ ಅಶ್ರಫ್, ಮಾಜಿ ಶಾಸಕ ಸಿ.ಎಚ್.ಕುಂಞಂಬು ಹಾಗೂ ಮಂಜೇಶ್ವರ ವಿಧಾನಸಭಾ ಮಂಡಲದ ಎಲ್ಲಾ ಪಂ.ಅಧ್ಯಕ್ಷರುಗಳು ಭಾಗವಹಿಸಿಲಿರುವರು.
ಕಾರ್ಯಕ್ರಮಕ್ಕೆ ವರ್ಕಾಡಿ ಗ್ರಾ.ಪಂ.ಬಹಿಷ್ಕಾರ
ಕೇರಳ ರಾಜ್ಯ ವ್ಯಾಪ್ತಿಯ ಮಲೆನಾಡು ಹೆದ್ದಾರಿ ಆರಂಭಗೊಳ್ಳುತ್ತಿವುದು ಜಿಲ್ಲೆಯ ವರ್ಕಾಡಿ ಪಂ.ವ್ಯಾಪ್ತಿಯ ನಂದರಪದವು ಎಂಬಲ್ಲಿ. ಆದರೆ ರಸ್ತೆಯ ನಿರ್ಮಾಣ ಕಾಮಗಾರಿಯ ಉದ್ಘಾಟಣಾ ಸಮಾರಂಭ ನಡೆಯುತ್ತಿರುವುದು ಪೈವಳಿಕೆ ಪಂ.ವ್ಯಾಪ್ತಿಯಲ್ಲಾಗಿದ್ದು, ಇದರ ಹಿಂದೆ ದುರುದ್ದೇಶ ನಡೆದಿದೆ ಎಂದು ವರ್ಕಾಡಿ ಗ್ರಾ.ಪಂ.ಆರೋಪ ನಡೆಸಿದ್ದು, ಕಾರ್ಯಕ್ರಮವನ್ನು ಬಹಿಷ್ಕರಿಸಿದೆ. ಶನಿವಾರ ಮಂಜೇಶ್ವರ ಪ್ರೆಸ್ ಕ್ಲಬ್ಬಿನಲ್ಲಿ ನಡೆದ ಪತ್ರಿಕಾಗ್ಟೋಯಲ್ಲಿ ವರ್ಕಾಡಿ ಪಂ.ಸಂಬಂಧಪಟ್ಟವರು ಮಾತನಾಡಿ, ಮಲೆನಾಡು ಹೆದ್ದಾರಿ ಆರಂಭಗೊಳ್ಳುವ ವರ್ಕಾಡಿ ಪಂ.ನ್ನು ಇದೀಗ ಕಾರ್ಯಕ್ರಮ ನಡೆಸುವ ಸ್ವಾಗತ ಸಮಿತಿಯವರು ಸಂಪೂರ್ಣ ಕಡೆಗಣಿಸಿದ್ದು ಮುಂದಿನ ಯಾವುದೇ ಕೆಲಸಗಳಿಗೆ ವರ್ಕಾಡಿ ಪಂಚಾಯತಿ ಸಹಕರಿಸುವುದಿಲ್ಲ ಎಂದು ತಿಳಿಸಿದೆ.
ಪತ್ರಿಕಾಗ್ಠೋಯಲ್ಲಿ ವರ್ಕಾಡಿ ಪಂ. ಅಧ್ಯಕ್ಷ ಅಬ್ದುಲ್ ಮಜೀದ್ ಬಿ.ಎ, ಉಪಾಧ್ಯಕ್ಷೆ ಸುನಿತಾ ವಲ್ಟಿ ಡಿಸೋಜ, ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷೆ ರೆಹಮತ್ ರಝಾಕ್, ಸದಸ್ಯರಾದ ಗೋಪಾಲಕೃಷ್ಣ ಪಜ್ವ, ವಸಂತ.ಎಸ್ ಉಪಸ್ಥಿತರಿದ್ದರು.


