ಪಾಟು ಉತ್ಸವದ ಸಂದರ್ಭದಲ್ಲಿ ಅಭಿನಂದನೆ
0
ಡಿಸೆಂಬರ್ 20, 2018
ಮುಳ್ಳೇರಿಯ: ದೇಲಂಪಾಡಿ ಶ್ರೀ ಉಮಾಮಹೇಶ್ವರ ಮಹಾಗಣಪತಿ ಶಾಸ್ತಾರ ದೇವಸ್ಥಾನದ ಪಾಟು ಉತ್ಸವದ ಸಾಂಸಕೃತಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ಯಕ್ಷಗಾನ ಕಲಾವಿದರೂ ಆಗಿರುವ ಮುಳ್ಳೇರಿಯ ಜಿವಿಎಚ್‍ಎಸ್ ಶಾಲೆಯ ಮುಖ್ಯ ಶಿಕ್ಷಕ ಯತೀಶ್ ಕುಮಾರ್ ರೈ ಇವರನ್ನು ಅಭಿನಂದಿಸಲಾಯಿತು.
ಶ್ರೀಕ್ಷೇತ್ರದ ಪಾರಂಪರಿಕ ಮೊಕ್ತೇಸರ ಸುರೇಶ್ ಅರಳಿತ್ತಾಯ ಗೌರವಿಸಿದರು. ಮುಳಿಯಾರು ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ಆಡಳಿತ ಮೊಕ್ತೇಸರ ಸೀತಾರಾಮ ಬಳ್ಳುಳ್ಳಾಯ ನಿರೂಪಿಸಿದರು. ಉದಯರಾಜ ಅರಳಿತ್ತಾಯ, ಸುಬ್ರಹ್ಮಣ್ಯ ಮಾಸ್ಟರ್ ಉಬ್ರಂಗಳ ಸಹಕರಿಸಿದರು.


