HEALTH TIPS

ಡಿ.22ರಿಂದ ಕುಂಟಾರು ಶಾಲೆಯಲ್ಲಿ ಎನ್‍ಎಸ್‍ಎಸ್ ಶಿಬಿರ

ಮುಳ್ಳೇರಿಯ: ಬೋವಿಕ್ಕಾನ ಬಿಎಆರ್‍ಎಚ್‍ಎಸ್ ಶಾಲೆಯ ಎನ್‍ಎಸ್‍ಎಸ್ ಸಪ್ತದಿನ ಶಿಬಿರ ಹರಿತಂ-2018 ಡಿ.22ರಿಂದ 28ರ ತನಕ ಕುಂಟಾರು ಅನುದಾನಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ. ಡಿ.22ರಂದು ಬೆಳಿಗ್ಗೆ 10ಕ್ಕೆ ನೋಂದಾವಣೆ, 10.30ಕ್ಕೆ ಕುಂಟಾರು ಶಾಲೆಯ ಮುಖ್ಯ ಶಿಕ್ಷಕಿ ಪ್ರಶಾಂತ ಧ್ವಜಾರೋಹಣ ಮಾಡುವರು. ಮಧ್ಯಾಹ್ನ 2ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಕಾರಡ್ಕ ಬ್ಲಾಕ್ ಪಂಚಾಯಿತಿ ಅಧ್ಯಕ್ಷೆ ಓಮನಾ ರಾಮಚಂದ್ರನ್ ಉದ್ಘಾಟಿಸುವರು. ಕಾರಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನಸೂಯ ರೈ ಅಧ್ಯಕ್ಷತೆ ವಹಿಸುವರು. ಸಮಾರಂಭದಲ್ಲಿ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷೆ ಜನನಿ, ಗ್ರಾಮ ಪಂಚಾಯಿತಿ ಸದಸ್ಯರಾದ ಮುಹಮ್ಮದ್, ಶ್ರೀವಿದ್ಯಾ, ಬೋವಿಕ್ಕಾನ ಶಾಲೆಯ ವ್ಯವಸ್ಥಾಪಕ ಬಿ.ಅಶ್ರಫ್, ಕುಂಟಾರು ಶಾಲೆಯ ವ್ಯವಸ್ಥಾಪಕ ಜಗದೀಶ್.ಕೆ, ಬೋವಿಕ್ಕಾನ ಶಾಲೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ ಗಫೂರ್, ಕುಂಟಾರು ಶಾಲೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಶಶಿಧರ, ಮಾತೃಸಂಘದ ಅಧ್ಯಕ್ಷ ಸುಹರಾ, ಹಾಜಿರಾ, ಬಿಎಆರ್‍ಎಚ್‍ಎಸ್‍ಎಸ್ ಪ್ರಾಂಶುಪಾಲ ಮೆಜೋ ಜೋಸೆಫ್, ಮುಖ್ಯ ಶಿಕ್ಷಕ ಅರವಿಂದಾಕ್ಷನ್ ನಂಬ್ಯಾರ್, ಕುಂಟಾರು ಶಾಲೆಯ ಮುಖ್ಯ ಶಿಕ್ಷಕಿ ಪ್ರಶಾಂತ, ಕರೀಂ ಕೋಯಕ್ಕಿಲ್, ಹರಿದಾಸ್, ಶಾಹುಲ್ ಹಮೀದ್, ಮಣಿಕಂಠನ್, ಶಿಕ್ಷಕಿ ಆಶಾ, ಎನ್‍ಎಸ್‍ಎಸ್ ಕಾರ್ಯಕ್ರಮ ಅಧಿಕಾರಿ ಪ್ರೀತಮ್.ಎ.ಕೆ ಉಪಸ್ಥಿತರಿರುವರು. ಈ ದಿನಗಳಲ್ಲಿ ಯೋಗ, ತರಗತಿಗಳು, ಯೋಜನೆಯ ಕೆಲಸ, ಕ್ರಿಸ್ಮಸ್ ಕಾರ್ಯಕ್ರಮ, ಸಾಂಸ್ಕøತಿಕ ಕಾರ್ಯಕ್ರಮ ಮೊದಲಾದವುಗಳು ನಡೆಯಲಿದೆ. ಡಿ.28ರಂದು ಮಧ್ಯಾಹ್ನ 2ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಕಾರಡ್ಕ ಪಂಚಾಯಿತಿ ಸದಸ್ಯೆ ಶ್ರೀವಿದ್ಯಾ ಅಧ್ಯಕ್ಷತೆ ವಹಿಸುವರು. ಬ್ಲಾಕ್ ಪಂಚಾಯಿತಿ ಸದಸ್ಯ ವಾರಿಜಾಕ್ಷನ್ ಉದ್ಘಾಟಿಸುವರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries