ಸಿರಿಬಾಗಿಲು ಪ್ರತಿಷ್ಠಾನ ಆಮಂತ್ರಣ ಪತ್ರಿಕೆ ಬಿಡುಗಡೆ
0
ಡಿಸೆಂಬರ್ 20, 2018
ಕುಂಬಳೆ: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನ ಕಾಸರಗೋಡು ನಡೆಸಿಕೊಂಡು ಬರುತ್ತಿರುವ ಯಕ್ಷಗಾನ ಸರಣಿ ಕಾರ್ಯಕ್ರಮಗಳ ಮುಂದುವರಿಕೆಯಾಗಿ `ಯಕ್ಷ ಕಾವ್ಯಾಂತರಂಗ-2' ಹಾಗೂ `ಅರ್ಥಾಂತರಂಗ-11' ಕಾರ್ಯಕ್ರಮಗಳು ಮೂಡಬಿದ್ರೆಯ `ಶ್ರೀ ಮಹಾಗಣಪತಿ ಮಹಾಲಿಂಗೇಶ್ವರ ದೇವಸ್ಥಾನ ಆಲಂಗಾರು' ಕ್ಷೇತ್ರದಲ್ಲಿ ಜ.13 ರಂದು ಭಾನುವಾರ ಬೆಳಿಗ್ಗೆ 10ರಿಂದ ಜರಗಲಿದೆ. ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಅಲಂಗಾರು ಕೇತ್ರದಲ್ಲಿ ಶ್ರೀ ಕೇತ್ರದ ಪ್ರಧಾನ ಅರ್ಚಕ ವೇ.ಮೂ.ಈಶ್ವರ ಭಟ್ ಬಿಡುಗಡೆ ಗೊಳಿಸಿದರು. ಧನ ಲಕ್ಷ್ಮಿ ಕ್ಯಾಶ್ಯೂ ಎಕ್ಸ್‍ಫಟ್ರ್ಸ್‍ನ ಮಾಲಕ ಶ್ರೀಪತಿ ಭಟ್, ದ.ಕ. ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಹಿರಿಯ ಭಾಗವತ ಪುತ್ತಿಗೆ ರಘುರಾಮ ಹೊಳ್ಳ, ವಿದ್ವಾನ್ ಪಂಜ ಭಾಸ್ಕರ ಭಟ್, ಸದಾಶಿವ ರಾವ್ ನೆಲ್ಲಿಮಾರ್ ಉಪಸ್ಥಿತರಿದ್ದರು.


