29ರಂದು ಪಿಂಚಣಿ ಅದಾಲತ್
0
ಡಿಸೆಂಬರ್ 20, 2018
ಕುಂಬಳೆ: ಕುಂಬಳೆ ಗ್ರಾಮ ಪಂಚಾಯತಿಯಲ್ಲಿ ಸಮಾಜ ಸುರಕ್ಷಾ ಪಿಂಚಣಿ ಅರ್ಜಿ ಸಲ್ಲಿಸಿದ್ದು, ನೂತನ ಮಾನದಂಡಗಳ ಹಿನ್ನೆಲೆಯಲ್ಲಿ ತಿರಸ್ಕರಿಸಲ್ಪಟ್ಟವರಿಗೆ ಈ ಸಂಬಂಧ ಅದಾಲತ್ ಡಿ.29ರಂದು ಬೆಳಿಗ್ಗೆ 11 ಗಂಟೆಗೆ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ನಡೆಯಲಿದೆ. ದೂರುದಾತರು ದಾಖಲೆಗಳ (ಪಿಂಚಣಿಯ ವಿಭಾಗ, ಆಧಾರ್ ಕಾರ್ಡ್ ನಂಬ್ರ, ಅಂಗೀಕೃತ ಗುರುತುಚೀಟಿಯ ನಕಲು, ದೂರುದಾತ ವಾಸವಾಗಿರುವ ವಾರ್ಡ್ ಇತ್ಯಾದಿ)ಸಹಿತ ಡಿ.24ರ ಮುಂಚಿತವಾಗಿ ಅರ್ಜಿಸಲ್ಲಿಸಬೇಕೆಂದು ಸಂಬಂಧಪಟ್ಟವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

