ಮೆಗಾ ಗೇರುಬೀಜ ಮೇಳ
0
ಡಿಸೆಂಬರ್ 16, 2018
ಕಾಸರಗೋಡು: ಮೆಗಾ ಕ್ಯಾಶ್ಯೂ ಫೆಸ್ಟ್ (ಗೇರುಬೀಜ ಮೇಳ) ಕಾಸರಗೋಡು ಕಲೆಕ್ಟರೇಟ್ ಪರಿಸರದಲ್ಲಿ ನಡೆಯಿತು. ಕುಟುಂಬಶ್ರೀ ಜಿಲ್ಲಾ ಮಿಷನ್‍ನ ಆಶ್ರಯದಲ್ಲಿ ಮಹಿಳೆಯರು ನಡೆಸುವ ಗೇರುಬೀಜ ಪರಿಷ್ಕರಣೆ ಸಮಿತಿ ಸಫಲಂ ಇದರ ನೇತೃತ್ವದಲ್ಲಿ ನಡೆಸಲಾದ ಮೇಳವನ್ನು ಜಿಲ್ಲಾಧಿಕಾರಿ ಡಾ.ಡಿ.ಸಜಿತ್‍ಬಾಬು ಉದ್ಘಾಟಿಸಿ ಮಾತನಾಡಿದರು.
ಕ್ರಿಸ್‍ಮಸ್ - ಹೊಸ ವರ್ಷಾಚರಣೆ ಸಂಬಂಧ ಮೇಳವನ್ನು ಹಮ್ಮಿಕೊಳ್ಳಲಾಗಿದ್ದು, ಈ ನಿಟ್ಟಿನಲ್ಲಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಪ್ರದರ್ಶನ ಮತ್ತು ಮಾರಾಟ ಜರಗಿತು. ಮಾರಾಟ ಮಾಡಲಾಗುವ ಉತ್ಪನ್ನಗಳಿಗೆ ಶೇಕಡಾ 15ರಷ್ಟು ರಿಯಾಯಿತಿ ನೀಡಲಾಗಿದ್ದು, ಗೇರುಬೀಜದ 20 ವಿಧಗಳನ್ನು ಮೇಳದಲ್ಲಿ ಸಾರ್ವಜನಿಕರಿಗೆ ಒದಗಿಸಲಾಯಿತು ಎಂದು ಸಂಘಟಕ ಸಮಿತಿಯ ಪದಾಧಿಕಾರಿಗಳು ತಿಳಿಸಿದರು.
ಕಿಲೋಗೆ 600ರೂ. ನಿಂದ 1300ರೂ. ತನಕ ಬೆಲೆಯಿರುವ ವಿವಿಧ ರೀತಿಯ ಗೇರುಬೀಜಗಳು 100 ಗ್ರಾಂನಿಂದ 500 ಗ್ರಾಂ ಅಳತೆಯಲ್ಲಿ ಪ್ಯಾಕೆಟ್‍ಗಳ ಮೂಲಕ ವಿತರಿಸಲಾಯಿತು. ಕಾಸರಗೋಡು ಸಿವಿಲ್ ಸ್ಟೇಷನ್‍ನಲ್ಲಿ ಆಯೋಜಿಸಲಾಗಿದ್ದ ಈ ಮೇಳದ ಸಮಾರೋಪ ಸಮಾರಂಭದಲ್ಲಿ ವಿವಿಧ ವಲಯಗಳ ಗಣ್ಯರು ಭಾಗವಹಿಸಿ ಶುಭ ಹಾರೈಸಿದರು.

