ಶಬರಿಮಲೆ ದೇವಾಸ್ಥಾನದಲ್ಲಿ ಮಂಗಳ ಮುಖಿಯರ ಪ್ರವೇಶಕ್ಕೆ ಪೊಲೀಸರ ತಡೆ
0
ಡಿಸೆಂಬರ್ 17, 2018
ಪತ್ತನಂತಿಟ್ಟ: ಶಬರಿ ಮಲೆ ದೇಗುಲ ಪ್ರವೇಶಿಸದಂತೆ ಮಂಗಳಮುಖಿಯರಿಗೆ ಭಾನುವಾರ ಪೊಲೀಸರು ತಡೆಯೊಡ್ಡಿದ ಘಟನೆ ನಡೆದಿದೆ.
ನಾಲ್ವರು ಮಂಗಳಮುಖಿಯರ ಪೈಕಿ ಅನನ್ಯ ಎಂಬ ಒಬ್ಟಾಕೆ ಮಾತನಾಡಿ ನಮಗೆ ಪೊಲೀಸರು ಅವಮಾನ ಮಾಡಿ, ಹೆದರಿಸಿದರು. ದೇವಾಲಯದ ಮೂಲ ಶಿಬಿರವಾದ ಎರುಮಲೈನಿಂದ ನಮ್ಮನ್ನು ಹಿಂದಕ್ಕೆ ಕಳುಹಿಸಿದರು ಎಂದು ನೋವು ತೋಡಿಕೊಂಡಿದ್ದಾರೆ..
ಎರ್ನಾಕುಲಂನಿಂದ ನಾವು ನಮ್ಮ ಯಾತ್ರೆ ಆರಂಭಿಸಿದ್ದೆವು. ನಾವು ಎರುಮಲೈ ತಲುಪಿದಾಗ ಪೊಲೀಸರು ಒರಟಾಗಿ ವರ್ತಿಸಿದರು. ಮಹಿಳಾ ಅಧಿಕಾರಿಗಳೂ ನಮ್ಮೊಂದಿಗೆ ಹಾಗೆಯೇ ವರ್ತಿಸಿದರು ಎಂದು ಅನನ್ಯ ಹೇಳಿಕೊಂಡಿದ್ದಾರೆ.
ಮೊದಲು ಅವರು ಮಹಿಳೆಯರ ವಸ್ತ್ರಗಳಲ್ಲಿ ನಿಮ್ಮನ್ನು ನಾವು ದೇವಾಲಯ ಪ್ರವೇಶಿಸಲು ಬಿಡುವುದಿಲ್ಲ , ಪುರುಷರಂತೆ ವಸ್ತ್ರ ಧರಿಸಿ ಎಂದರು. ಮೊದಲು ನಾವು ಸಾಧ್ಯವಿಲ್ಲ ಎಂದೆವಾದರೂ ಬಳಿಕ ಮನಸ್ಸು ಬದಲಿಸಿ ವಸ್ತ್ರ ಬದಲಾಯಿಸಿಕೊಳ್ಳಲು ಒಪ್ಪಿದೆವಾದರೂ ಪೊಲೀಸರು ಮಾತ್ರ ನಮಗೆ ದೇವಾಲಯ ಪ್ರವೇಶಿಸಿಲು ಅವಕಾಶ ನೀಡಲಿಲ್ಲ ಎಂದಿದ್ದಾರೆ.


