ಚೆರ್ಕಳ-ಕಲ್ಲಡ್ಕ ರಸ್ತೆ ಪುನರ್ ನಿರ್ಮಾಣಕ್ಕೆ ಚಾಲನೆ ಎಲ್ಲ ಕ್ಷೇತ್ರಗಳ ಅಭಿವೃದ್ಧಿಗೆ ಸರಕಾರ ಬದ್ದ: ಸಚಿವ ಸುಧಾಕರನ್
0
ಡಿಸೆಂಬರ್ 17, 2018
ಕಾಸರಗೋಡು: ಸಮಾಜದ ಎಲ್ಲ ಕ್ಷೇತ್ರಗಳ ಅಭಿವೃದ್ಧಿಗೆ ನಾಂದಿ ಹಾಡಲು ರಾಜ್ಯಸರಕಾರ ಪ್ರತಿಜ್ಞಾಬದ್ಧವಾಗಿದೆ ಎಂದು ಲೋಕೋಪಯೋಗಿ ಸಚಿವ ಜಿ.ಸುಧಾಕರನ್ ಅಭಿಪ್ರಾಯಪಟ್ಟರು.
ಜಿಲ್ಲೆಯ ಪ್ರಧಾನ ಅಂತರ್ ರಾಜ್ಯ ಹೆದ್ದಾರಿ ಚೆರ್ಕಳ-ಕಲ್ಲಡ್ಕ ರಸ್ತೆಯ ಪುನರ್ ನಿರ್ಮಾಣ ಕಾಮಗಾರಿಗೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.
ಎಲ್ಲ ಜನತೆಯನ್ನು ಒಗ್ಗೂಡಿಸಿ ಜಾರಿಗೆ ತರುವ ಅಭಿವೃದ್ಧಿ ಯೋಜನೆಗಳಿಗೆ ಸರಕಾರ ಆದ್ಯತೆ ನೀಡುತ್ತಿದೆ. ಚೆರ್ಕಳದಲ್ಲಿ ತೆರವುಗೊಳಿಸಿದ ವೃತ್ತ ನಿರ್ಮಾಣ ಸಂಬಂಧ 4 ಟೆಂಡರ್ ಕೋರಿದ್ದರೂ ಕೆಲವು ಮಂದಿಯ ಮಕಾರಾತ್ಮಕ ನಿಲುವಿನ ಪರಿಣಾಮ ಗುತ್ತಿಗೆದಾರರು ಸಿದ್ಧರಾಗುತ್ತಿಲ್ಲ ಎಂದು ಆರೋಪಿಸಿದ ಅವರು ಈ ಸತ್ಯ ಮನವರಿಕೆ ಮಾಡಿಕೊಂಡು ಸಾರ್ವಜನಿಕರೇ ಯೋಜನೆಗೆ ಪೂರವಾಗಿ ಕ್ರಮಕೈಗೊಳ್ಳುವ ದಿನ ದೂರವಿಲ್ಲ ಎಂದು ತಿಳಿಸಿದರು.
ಪ್ರಧಾನ ಇಂಜಿನಿಯರ್ ವಿ.ವಿ.ಬಿನು, ಕಾಸರಗೋಡು ಬ್ಲೋಕ್ ಪಂಚಾಯತ್ ಅಧ್ಯಕ್ಷ ಮಹಮ್ಮದ್ ಕುಂಞಿ ಚಾಯಿಂಡಡಿ, ಚೆಂಗಳ ಗ್ರಾಮಪಂಚಾಯತ್ ಅಧ್ಯಕ್ಷ ಶಹಾನಾ ಸಲೀಂ, ಬದಿಯಡ್ಕ ಗ್ರಾಮಪಂಚಾಯತ್ ಅಧ್ಯಕ್ಷಕೆ.ಎನ್.ಕೃಷ್ಣಭಟ್, ಕಾರ್ಯಕಾರಿ ಇಂಜಿನಿಯರ್ ಕೆ.ಪಿ.ವಿನೋದ್ ಕುಮಾರ್, ವರಿಷ್ಠ ಇಂಜಿನಿಯರ್ ಇ.ಜಿ.ವಿಶ್ವಪ್ರಕಾಶ್, ಚೆಂಗಳ ಗ್ರಾಮಪಂಚಾಯತ್ ಸದಸ್ಯ ಅಬ್ದುಲ್ಲ ಕುಂಞಿ ಮೊದಲಾದವರು ಉಪಸ್ಥಿತರಿದ್ದರು.


