ಇಂದಿನಿಂದ ದೃಡೀಕರಣ ಸೇವೆ
0
ಡಿಸೆಂಬರ್ 17, 2018
ಕಾಸರಗೋಡು: ಸೌದಿ ಅರೆಬಿಯಾಕ್ಕೆ ತೆರಳುವ ಕೇರಳದ ಉದ್ಯೋಗಾರ್ಥಿಗಳ ಸೌದಿ ಎಂಬೆಸಿ ದೃಡೀಕರಣ ಸೇವೆ ಡಿ.17ರಿಂದ ನೋರ್ಕ್ ರೂಟ್ಸ್ ಮುಖಾಂತರ ಲಭ್ಯವಿರುವುದು. ನೋರ್ಕ್ ರೂಟ್ಸ್ನ ತಿರುವನಂತಪುರಂ, ಎರ್ನಾಕುಲಂ, ಕೋಯಿಕೋಡ್ ವಲಯ ಕಚೇರಿಗಳಲ್ಲಿ ಈ ಸೌಲಭ್ಯ ದೊರೆಯಲಿದೆ. ಒಂದು ಅರ್ಹತಾಪತ್ರಕ್ಕೆ 5 ಸಾವಿರ ರೂ.ಶುಲ್ಕ, ಆಯಾ ವಿವಿಗಳ ಪರಿಶೀಲನಾ ಶುಲ್ಕ, ನೋರ್ಕ್ ರೂಟ್ಸ್ನ ಸೇವಾ ಶುಲ್ಕ ನೀಡಬೇಕು. ಕೇರಳದ ವಿವಿಗಳ ಅರ್ಹತಾಪತ್ರಗಳ ಪರಿಶೀಲನೆ ಈ ವೇಳೆ ನಡೆಯಲಿದೆ. ಹೆಚ್ಚಿನ ಮಾಹಿತಿಗೆwww.norkaroots.netಎಂಬ ವೆಬ್ ಸೈಟ್ ಅಥವಾ 24 ತಾಸು ಚಟುವಟಿಕೆ ನಡೆಸುವ ನೋರ್ಕ್ ರೂಟ್ಸ್ ನ ಕಾಲ್ ಸೆಂಟರ್ ನ 18004253939 ಎಂಬ ದೂರವಾಣಿ ನಂಬ್ರಕ್ಕೆ ಕರೆಮಾಡಬಹುದು.

