ಕಾಶೀ ಶ್ರೀಗಳಿಗೆ ವೈಭವದ ಸ್ವಾಗತ
0
ಡಿಸೆಂಬರ್ 19, 2018
ಕಾಸರಗೋಡು: ಶ್ರೀ ವರದರಾಜ ವೆಂಕಟರಮಣ ದೇವಸ್ಥಾನದಲ್ಲಿ ನಡೆಯುತ್ತಿರುವ ಸಂಕೀರ್ತನಾ ಸಪ್ತಾಹ ಸಮಾರಂಭದ ದಿವ್ಯ ನೇತೃತ್ವ ವಹಿಸಲು ಕಾಶೀ ಮಠಾಧೀಶ ಶ್ರೀ ಸಂಯಮೀಂದ್ರ ತೀರ್ಥ ಶ್ರೀಪಾದರು ಆಗಮಿಸಿದರು.
ಪೂರ್ಣಕುಂಭ ಸ್ವಾಗತ ನೀಡಿ ಶ್ರೀಗಳನ್ನು ಕ್ಷೇತ್ರಕ್ಕೆ ಬರಮಾಡಿಕೊಳ್ಳಲಾಯಿತು. ಶ್ರೀ ವರದರಾಜ ವೆಂಕಟರಮಣ ಪರಿವಾರ ದೇವರು ಹಾಗು ಸಪ್ತಾಹ ಸಮಾರಂಭದ ಆರಾಧ್ಯ ದೇವರನ್ನು ವಂದಿಸಿ ಶ್ರೀಗಳು ಸ್ವಾಗತ ಸಮಾರಂಭದಲ್ಲಿ ಉಪಸ್ಥಿತಿ ನೀಡಿ ಹತ್ತು ಸಮಸ್ತರ ಪ್ರಸಾದವನ್ನು ಕ್ಷೇತ್ರದ ಆಡಳಿತ ಮಂಡಳಿ ವಕ್ತಾರರಾದ ಕೆ.ನಾಗೇಶ್ ಕಾಮತ್, ವಿದ್ಯಾಕರ ಮಲ್ಯ, ಅಶೋಕ್ ಶೆಣೈ ಅವರಿಗೆ ನೀಡಿ ಆಶೀರ್ವದಿಸಿದರು.
ಶ್ರೀ ಕ್ಷೇತ್ರದಲ್ಲಿ ಶ್ರೀಗಳ ಅಮೃತ ಹಸ್ತದಿಂದ ಬೆಳ್ಳಿ ಕಲಶದ ಶತ ಕಲಶಾಭಿಷೇಕ ವರದರಾಜ ವೆಂಕಟರಮಣ ದೇವರಿಗೆ ನಡೆಯಿತು. ವಿಠೋಬಾ ರಕುಮಾಯಿ ದೇವರಿಗೂ ವಿಶೇಷ ಪೂಜೆ ನೆರವೇರಿತು.


