`ಚಿನ್ಮಯಂ' ಗೃಹದ ಕೀಲಿಕೈ ಹಸ್ತಾಂತರ
0
ಡಿಸೆಂಬರ್ 19, 2018
ಕಾಸರಗೋಡು: ಪರಮಪೂಜ್ಯ ಸ್ವಾಮಿ ಚಿನ್ಮಯಾನಂದರ ಜನ್ಮ ಶತಮಾನೋತ್ಸವದ ಅಂಗವಾಗಿ ಚಿನ್ಮಯ ಮಿಷನ್ ಹಮ್ಮಿಕೊಂಡ `ಹೋಮ್ ಫಾರ್ ಹೋಮ್‍ಲೆಸ್' (ವಸತಿ ರಹಿತರಿಗೆ ವಸತಿ ನಿರ್ಮಾಣ) ಯೋಜನೆಯ ಅಂಗವಾಗಿ ಕಾಸರಗೋಡು ನಗರಸಭೆಯ ಜೆ.ಪಿ.ನಗರ ಕನ್ನಡ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ `ಚಿನ್ಮಯಂ' ಗೃಹದ ಕೀಲಿಕೈಯನ್ನು ಸ್ವಾಮಿ ವಿವಿಕ್ತಾನಂದ ಸರಸ್ವತೀ ಅವರ ಉಪಸ್ಥಿತಿಯಲ್ಲಿ ಶಾಸಕ ಎನ್.ಎ.ನೆಲ್ಲಿಕುನ್ನು ಅವರು ಫಲಾನುಭವಿ ದೇವಕಿ ಅವರಿಗೆ ಹಸ್ತಾಂತರಿಸಿದರು.
ಈ ಯೋಜನೆಯಲ್ಲಿ ಕೇರಳದಲ್ಲಿ ಒಟ್ಟು 100 ಮನೆಗಳನ್ನು ಹಸ್ತಾಂತರಿಸಲಿದ್ದು ಕಾಸರಗೋಡಿನಲ್ಲಿ 10 ಮನೆಗಳನ್ನು ನಿರ್ಮಿಸಲಾಗುವುದು. ಕಾಸರಗೋಡಿನಲ್ಲಿ ನೀಡುತ್ತಿರುವ ಎರಡನೇ ಮನೆಯಾಗಿದೆ ಇದಾಗಿದೆ. ಮುಂದಿನ ದಿನಗಳಲ್ಲಿ ಉದ್ದೇಶಿತ ಮನೆಗಳನ್ನು ಹಸ್ತಾಂತರಿಸಲಾಗುವುದೆಂದು ಸಂಬಂಧಪಟ್ಟವರು ತಿಳಿಸಿರುವರು.
ಕಾರ್ಯಕ್ರಮದಲ್ಲಿ ಚಿನ್ಮಯ ಮಿಷನ್ ಅಧ್ಯಕ್ಷ ಎ.ಕೆ.ನಾಯರ್, ಚಿನ್ಮಯ ಮಿಷನ್ ಕಾರ್ಯದರ್ಶಿ ಕೆ.ಬಾಲಚಂದ್ರನ್, ಚಿನ್ಮಯ ವಿದ್ಯಾಲಯದ ಪ್ರಾಂಶುಪಾಲ ಬಿ.ಪುಷ್ಪರಾಜ್, ಉಪಪ್ರಾಂಶುಪಾಲೆ ಸಂಗೀತ ಪ್ರಭಾಕರನ್, ಮುಖ್ಯೋಪಾಧ್ಯಾಯಿನಿ ಸಿಂಧು ಶಶೀಂದ್ರನ್, ಆಡಳಿತಾಧಿಕಾರಿ ಪ್ರವೀಣ್, ವಾರ್ಡ್ ಕೌನ್ಸಿಲರ್ ಶಂಕರ, ಅಭಿಯಂತರ ದಿನೇಶ್ ನಾಯ್ಕ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

