ಒಳರೋಗಿಗಳಿಗೆ ಬಿಸಿಯೂಟ ವಿತರಣೆ
0
ಡಿಸೆಂಬರ್ 21, 2018
ಕಾಸರಗೋಡು: ಕಾಸರಗೋಡು ಬಿ.ಇ.ಎಂ. ಹೈಸ್ಕೂಲ್ ಹಾಗು ಕೂಡ್ಲು ಶ್ರೀ ಗೋಪಾಲಕೃಷ್ಣ ಹೈಸ್ಕೂಲಿನ ಮಾಜಿ ಕಲಾ ಶಿಕ್ಷಕ , ಕಲಾವಿದ ದಿ.ಗೋಪಾಲಕೃಷ್ಣ ಶ್ಯಾನುಭೋಗ್ ಸ್ಮರಣಾರ್ಥ ನುಳ್ಳಿಪಾಡಿ ಸರಕಾರಿ ಆಯುರ್ವೇದ ಆಸ್ಪತ್ರೆ ಹಾಗು ನಗರದ ಸರಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಒಂದು ದಿನದ ಬಿಸಿಯೂಟ ಕಾರ್ಯಕ್ರಮವನ್ನು ಕೇರಳ ಗ್ರಾಮೀಣ ಬ್ಯಾಂಕ್‍ನ ವಿಭಾಗೀಯ ಪ್ರಬಂಧಕ ಎನ್.ಕೆ.ಪ್ರಸನ್ನ ಅವರು ಉದ್ಘಾಟಿಸಿದರು.
ಕಲಾವಿದ ಕೆ.ಜಿ.ಎಸ್.ಟ್ರಸ್ಟ್‍ನ ಅಧ್ಯಕ್ಷ ವಿಷ್ಣು ಶ್ಯಾನುಭೋಗ್, ಕಾರ್ಯದರ್ಶಿ ಪ್ರಸನ್ನ ಶ್ಯಾನುಭೋಗ್, ಕೇರಳ ಗ್ರಾಮೀಣ ಬ್ಯಾಂಕ್‍ನ ಜಯಂತ ಭಂಡಾರಿ ಮೊದಲಾದವರು ಉಪಸ್ಥಿತರಿದ್ದರು. ಸೇವಾ ಭಾರತಿ ಕಾಸರಗೋಡು ಘಟಕ ಕಾರ್ಯಕ್ರಮವನ್ನು ನಡೆಸಿಕೊಟ್ಟಿತು.


