ಚಿನ್ಮಯದಲ್ಲಿ ಕ್ರೀಡಾ ಮೇಳ- ಕ್ರೀಡಾರಂಗದಲ್ಲೂ ವಿದ್ಯಾರ್ಥಿಗಳು ಮಿಂಚಬೇಕು : ಎ.ಡಿ.ಎಂ. ದೇವಿದಾಸ್
0
ಡಿಸೆಂಬರ್ 21, 2018
ಕಾಸರಗೋಡು: ಚಿನ್ಮಯ ವಿದ್ಯಾಲಯದ 2018-19 ರ ಶೈಕ್ಷಣಿಕ ವರ್ಷದ ಕ್ರೀಡಾ ಮೇಳ ಶುಕ್ರವಾರ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯ ಅತಿಥಿ ಕಾಸರಗೋಡಿನ ಎ.ಡಿ.ಎಂ. ದೇವಿದಾಸ್ ಎಂ. ಅವರು ಚಿನ್ಮಯ ವಿದ್ಯಾಲಯವು ಮೌಲ್ಯಯುತವಾದ ಶಿಕ್ಷಣವನ್ನೂ, ಯೋಗ್ಯ ಪ್ರಜೆಗಳನ್ನೂ ಸೃಷ್ಟಿಸುವಲ್ಲಿ ಮುಂಚೂಣಿಯಲ್ಲಿದೆ. ಆಧುನಿಕತೆಯತ್ತ ಸಾಗುತ್ತಿರುವ ಸಮಾಜಕ್ಕೆ ಬದ್ಧವಾಗಿ ಪ್ರತಿಭಾವಂತ ವಿದ್ಯಾರ್ಥಿಗಳ ಕೊಡುಗೆಯನ್ನು ಈ ವಿದ್ಯಾಲಯವು ನೀಡುತ್ತಿದೆ. ಭಾರತವು ವಿವಿಧ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವಂತೆಯೇ ಕ್ರೀಡಾರಂಗದಲ್ಲೂ ಸಮಾನಾಂತರವಾಗಿ ಬೆಳೆಯಬೇಕಾಗಿರುವುದು ಇಂದಿನ ಅನಿವಾರ್ಯ. ಚಿನ್ಮಯ ವಿದ್ಯಾಲಯದ ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಗುರಿಯತ್ತ ಸಾಗಬೇಕಾದುದು ಅನಿವಾರ್ಯ ಎಂದರು.
ವಿವಿಧ ಗುಂಪಿನ ವಿದ್ಯಾರ್ಥಿಗಳು ಪಥಸಂಚಲನಗೈದು ಪ್ರಾಂಶುಪಾಲ ಬಿ.ಪುಷ್ಪರಾಜ್ ಅವರಿಗೆ ವಂದನೆ ಸಲ್ಲಿಸಿದರು. ಕ್ರೀಡಾ ಶಿಕ್ಷಕ ಮಣಿಕಂಠನ್ ನೇತೃತ್ವ ವಹಿಸಿದರು. ವಿದ್ಯಾಲಯದ ಅಧ್ಯಕ್ಷ ಪೂಜ್ಯ ಸ್ವಾಮಿ ವಿವಿಕ್ತಾನಂದ ಸರಸ್ವತಿಜಿ ಅವರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಬಾಸ್ಕೆಟ್ ಬಾಲ್ ಹಾಗು ಬ್ಯಾಡ್ಮಿಂಟನ್ ಪ್ರಾತ್ಯಕ್ಷಿಕೆ ಪ್ರದರ್ಶಿಸಿದರು.
ವಿದ್ಯಾಲಯದ ವಿದ್ಯಾರ್ಥಿ ನಾಯಕ ಮಂಜೇಶ್ ರಾಜ್ ಸ್ವಾಗತಿಸಿ, ವಿದ್ಯಾರ್ಥಿನಿ ನಾಯಕಿ ನಖೀಬತ್ ವೈಭ ವಂದಿಸಿದರು.

